ಅಮೆರಿಕಾ, ಜರ್ಮನಿಯಿಂದ ತಾಲಿಬಾನಿಗಳಿಗೆ ಬಿಗ್ ಶಾಕ್ ; ಅಫ್ಘಾನಿನ 7 ಲಕ್ಷ ಕೋಟಿ ಸೀಜ್

Team Newsnap
1 Min Read

ಅಫ್ಘಾನಿಸ್ತಾನವನ್ನು ವಶಪಡಿಸಿ ಕೊಂಡಿರುವ ತಾಲಿಬಾನಿಗಳಿಗೆ ಅಮೆರಿಕಾ ಮತ್ತು ಜರ್ಮನಿ ದೇಶಗಳು ಬಿಗ್ ಶಾಕ್ ಕೊಟ್ಟಿವೆ.

ಅಫ್ಘಾನಿಸ್ತಾನ ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಅಫ್ಘಾನ್ ಸೆಂಟ್ರಲ್​ ಬ್ಯಾಂಕ್​ಗೆ ಸೇರಿದ 7 ಲಕ್ಷ ಕೋಟಿಗೂ ಅಧಿಕ ಹಣವನ್ನು ಅಮೆರಿಕಾ ಸೀಜ್ ಮಾಡಿದೆ.

ನಿನ್ನೆಯಷ್ಟೇ ಬ್ಯಾಂಕ್ ಮುಖ್ಯಸ್ಥ ಅಫ್ಘಾನ್​ನಿಂದ ಪಲಾಯನ ಮಾಡಿದ್ದ. ಈ ಬೆನ್ನಲ್ಲೇ ಹಣ ಸೀಜ್ ಮಾಡುವ ಮೂಲಕ ತಾಲಿಬಾನಿಗಳಿಗೆ ಅಮೆರಿಕಾ ಶಾಕ್ ಕೊಟ್ಟಿದೆ.

ಸೆಂಟ್ರಲ್ ಬ್ಯಾಂಕ್​ನಲ್ಲಿ ಅಫ್ಘಾನ್ ಸರ್ಕಾರ ಅಮೆರಿಕಾದಲ್ಲಿರುವ ತನ್ನ ಆಸ್ತಿಯನ್ನು ಸೆಂಟ್ರಲ್ ಬ್ಯಾಂಕ್​ನಲ್ಲಿ ಇರಿಸಿತ್ತು. ಈ ಆಸ್ತಿಯನ್ನು ತಾಲಿಬಾನ್​ಗೆ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೆಂಟ್ರಲ್ ಬ್ಯಾಂಕ್​ನ ಆ್ಯಕ್ಟಿಂಗ್ ಹೆಡ್ ಅಜ್ಮಲ್ ಅಹ್ಮದಿ ಟ್ವೀಟ್ ಮಾಡಿ ಈ ಫಂಡ್​ ತಾಲಿಬಾನಿಗಳ ಕೈ ಸೇರದಂತೆ ಅಮೆರಿಕಾ ಕ್ರಮ ಕೈಗೊಂಡಿದೆ.

ಡಿಎಬಿ ಬ್ಯಾಂಕ್​ನಲ್ಲಿ 7 ಲಕ್ಷ ಕೋಟಿ ಆಸ್ತಿ ಇದೆ. ನ್ಯೂಯಾರ್ಕ್ ಫೆಡರಲ್ ರಿಸರ್ವ್ ಮತ್ತು ಅಮೆರಿಕಾ ಮೂಲಕ ಫೈನಾನ್ಶಿಯಲ್ಇನ್​ಸ್ಟಿಟ್ಯೂಷನ್ ಸೀಜ್ ಮಾಡಬಹುದಾಗಿದೆ.

Share This Article
Leave a comment