December 29, 2024

Newsnap Kannada

The World at your finger tips!

bhargavi

ಸುಧಾ ಬೆಳವಾಡಿ ತಾಯಿ, ಹಿರಿಯ ರಂಗ ಭೂಮಿ ನಟಿ ಭಾರ್ಗವಿ ನಾರಾಯಣ್ ನಿಧನ

Spread the love

ಕನ್ನಡದ ಖ್ಯಾತ ನಟಿ ಸುಧಾ ಬೆಳವಾಡಿ ತಾಯಿ ಮತ್ತು ಹಿರಿಯ ರಂಗಭೂಮಿ ನಟಿ ಭಾರ್ಗವಿ ನಾರಾಯಣ್ ಇಂದು ಸಂಜೆ 7. 30 ಕ್ಕೆ ನಿಧನರಾದರು. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಭಾರ್ಗವಿ ನಾರಾಯಣ್ ಅವರು ಕನ್ನಡದ ಹಿರಿಯ ನಟಿ ಮತ್ತು ರಂಗಭೂಮಿಯ ಕಲಾವಿದೆ.

ಇವರು ಕೆಲವು ಪ್ರಸಿದ್ಧ ಚಿತ್ರಗಳು ನಟಿಸಿದ್ದಾರೆ. ಎರಡು ಕನಸು, ಪಲ್ಲವಿ ಅನುಪಲ್ಲವಿ, ಬಾ ನಲ್ಲೆ ಮಧುಚಂದ್ರಕೆ ಇವರ ಹಿಟ್​​ ಸಿನಿಮಾಗಳು.

ಸುಧಾ ಬೆಳವಾಡಿ ಹಾಗೂ ಮೊಮ್ಮಗಳು ಸಂಯುಕ್ತ ಹೊರನಾಡು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

bhargavi narayan

ಭಾರ್ಗವಿ ನಾರಾಯಣ್ ಅವರನ್ನು ಭಾರ್ಗವಿ ಬೆಳವಾಡಿ ಎಂದೂ ಕರೆಯುತ್ತಾರೆ.

ಭಾರ್ಗವಿ ( 84 ವರ್ಷ) 04 ಫೆಬ್ರವರಿ 1938 ಬೆಂಗಳೂರಿನಲ್ಲಿ ಜನಿಸಿದರು.

ಇಲ್ಲಿಯವರೆಗೆ ಭಾರ್ಗವಿ ನಾರಾಯಣ್ ಕಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಮನರಂಜನಾ ಉದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ.

ಅವರ ಕಲಾಕೃತಿಗಳು ತಮಿಳು, ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಬಿಡುಗಡೆಯಾಗಿದೆ.

Copyright © All rights reserved Newsnap | Newsever by AF themes.
error: Content is protected !!