ಮಂಡ್ಯ ( Mandya ) ಜಿಲ್ಲೆಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ( Bharat Jodo Yatra ) ಶುಕ್ರವಾರ ನಾಗಮಂಗಲ ತಾಲೂಕಿನಲ್ಲಿ ಚೌಡಗೋನಹಳ್ಳಿಯಿಂದ ಪ್ರಾರಂಭವಾಗಿ ಅಂಚೆಭೂವನಹಳ್ಳಿಯಲ್ಲಿ ತಲುಪಿತು,
ಗುರುವಾರ ಚೌಡಗೋನಹಳ್ಳಿ ಬಳಿಯ ಆಯುರ್ವೇದ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದ ರಾಹುಲ್ ಗಾಂಧಿ ( Rahul Gandhi ) ಮತ್ತಿತರರು ಇಂದು ಬೆಳಗ್ಗೆ 6.30ಕ್ಕೆ ಸಮೀಪದ ಮಲ್ಲೇನಹಳ್ಳಿ ಗ್ರಾಮದಿಂದ ಯಾತ್ರೆ ಆರಂಭಿಸಿದರು.ಇದನ್ನು ಓದಿ –ಇಡಿಗೆ ದಾಖಲೆಗಳನ್ನು ಸಲ್ಲಿಸಲು ನಾನು ಒಪ್ಪಿದ್ದೇನೆ: ಡಿ.ಕೆ.ಶಿವಕುಮಾರ್
ನಾಗಮಂಗಲ ಪಟ್ಟಣ ಪ್ರವೇಶಿಸುತ್ತಿದ್ದಂತೆ ಭಾರೀ ಸಂಖ್ಯೆಯ ಜನತೆ ಪಾದಯಾತ್ರೆಯನ್ನು ಸ್ವಾಗತಿಸಿದರು.
ನಾಗಮಂಗಲ ( Nagamangla ) ಪ್ರವಾಸಿ ಮಂದಿರ ವೃತ್ತವನ್ನು ಬಳಸಿಕೊಂಡು ಮುನ್ನಡೆದ ರಾಹುಲ್‌ಗಾಂಧಿ ಮತ್ತಿತರರು ಉಪ್ಪಾರಹಳ್ಳಿ ಗೇಟ್ ಬಳಿ ಬೆಳಗಿನ ಉಪಹಾರ ಸೇವಿಸಿ ಕೆಲ ಸಮಯ ವಿಶ್ರಾಂತಿ ಪಡೆದರು. ಮತ್ತೆ 9.30ಕ್ಕೆ ಪಾದಯಾತ್ರೆ ಮುಂದುವರಿಸಿ ತಾಲೂಕಿನ ಅಂಚೆಭೂವನಹಳ್ಳಿ ಬಳಿ ಬೆಳಗ್ಗೆ 10.30ರ ವೇಳೆಗೆ ತಲುಪಿ ವಿಶ್ರಾಂತಿ ಪಡೆಯಿತು.
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನತೆಗೆ ಅಂಚೆ ಭೂವನಹಳ್ಳಿ ಬಳಿ ಊಟ ವಿತರಿಸಲಾಯಿತು. ಸಂಜೆ ಮತ್ತೆ 4 ಗಂಟೆಗೆ ಪಾದಯಾತ್ರೆ ಆರಂಭವಾಗಿ 6.30ರ ವೇಳೆಗೆ ಬೆಳ್ಳೂರು ತಲುಪಲಿದೆ. ಬಳಿಕ ಆದಿಚುಂಚನಗಿರಿಗೆ ತೆರಳುವ ರಾಹುಲ್ ಮತ್ತು ಇತರರು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ಮಾರ್ಗ ಮಧ್ಯೆದಲ್ಲಿ ಬರುವ ಹಳ್ಳಿಗಳ ಜನತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಾಂಗ್ರೆಸ್ ( Congress ) ನಾಯಕ ರಾಹುಲ್‌ಗಾಂಧಿಯವರನ್ನು ನೋಡಲು ಮುಗಿಬಿದ್ದರು. ಈ ವೇಳೆ ವೃದ್ಧರು, ವೃದ್ದ ಮಹಿಳೆಯರನ್ನು ಕಂಡ ರಾಹುಲ್ ಅವರನ್ನು ತಮ್ಮ ಬಳಿಗೆ ಕರೆದು ಮಾತನಾಡಿಸಿ ಮುನ್ನಡೆದರು. ಕೆಲ ಯುವತಿಯರು ರಾಹುಲ್‌ರೊಂದಿಗೆ ಹೆಜ್ಜೆಹಾಕಿ ಸೆಲ್ಫಿ ಗಿಟ್ಟಿಸಿಕೊಂಡರು. ಮತ್ತೆ ಕೆಲವರು ತಮ್ಮ ಪುಟ್ಟ ಮಕ್ಕಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಜೊತೆಗೆ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.SC/ST ಮೀಸಲಾತಿ ಹೆಚ್ಚಳ: ನಾಳೆಯೇ ಅಂತಿಮ ಮುದ್ರೆ- ಸಿಎಂ ಬೊಮ್ಮಾಯಿ
ನಗು ನಗುತ್ತಲೇ ಅವರ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ನೀಡಿದ ರಾಹುಲ್ ಅವರನ್ನೂ ತಮ್ಮೊಡನೆ ಕರೆದುಕೊಂಡು ಪಾದಯಾತ್ರೆ ಮುಂದುವರಿಸಿದ್ದು ವಿಶೇಷವಾಗಿತ್ತು.
ನಾಗಮಂಗಲ ದಲ್ಲಿ ಪುಟ್ಟ ಮಕ್ಕಳಿಗೆ ಚಾಕೋಲೇಟ್ ನೀಡಿದ ರಾಹುಲ್ ಗಾಂಧಿ ಅವರು ಮಕ್ಕಳ ಕೆನ್ನೆ ಸವರಿ, ಮೈದಡವಿ ಮುನ್ನಡೆಯುತ್ತಿದ್ದರು. ಕೆಲ ಯುವಕರು ಅವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಶುಕ್ರವಾರ ಸಹ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ರಾಹುಲ್ ಆಗಮಿಸುವ ವೇಳೆ ನಾಗಮಂಗಲ ಪಟ್ಟಣದಲ್ಲಿ ಭಾರೀ ಜನಸಮೂಹವೇ ನೆರೆದಿತ್ತು.
ಭಾರತ್ ಜೋಡೋ ಯಾತ್ರೆಯ ( Bharat Jodo Yatra ) ಟೀಶರ್ಟ್ ಧರಿಸಿದ್ದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಧ್ವಜ ಹಿಡಿದು ರಾಹುಲ್ ಪರ ಘೋಷಣೆ ಕೂಗುತ್ತಾ ಸಾಗಿದರು. ರಸ್ತೆಯ ಎರಡೂ ಕಡೆ ಭಾರತ್ ಜೋಡೋ ಯಾತ್ರೆಗೆ ಸ್ವಾಗತ ಕೋರುವ ಬ್ಯಾನರ್‌ಗಳು ಹಾರಾಡುತ್ತಿದ್ದರೆ, ಕಾಂಗ್ರೆಸ್ ನಾಯಕರ ಕಟೌಟ್‌ಗಳು, ಬೃಹದಾಕಾರದ ಫ್ಲೆಕ್ಸ್‌ಗಳು, ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿದ್ದವು. ಮೂರ್ನಾಲ್ಕು ಕಿ.ಮೀ. ದೂರದವರೆಗೆ ಜನರು ಪಾದಯಾತ್ರೆಯಲ್ಲಿ ನಡೆದರು.
ಟಿಪ್ಪು ಸುಲ್ತಾನ್, ಕುವೆಂಪು ಪುಸ್ತಕ ವಿತರಣೆ
ಮಂಡ್ಯದ ನಾಗಮಂಗಲ ವಕೀಲರು ರಾಹುಲ್ ಗಾಂಧಿಗೆ ವಿಶೇಷ ಉಡುಗೊರೆ ನೀಡಿದರು . ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಫೋಟೊ ಜೊತೆಗೆ ಟಿಪ್ಪು ಸುಲ್ತಾನ್, ಕುವೆಂಪು ಪುಸ್ತಕ ಕೊಟ್ಟು ಭಾವೈಕ್ಯತೆ ಸಾರಿದ್ದಾರೆ. ನಾಗಮಂಗಲಕ್ಕೆ ಪ್ರವೇಶಿಸುತ್ತಿದ್ದಂತೆ ಭಾರತ್ ಜೋಡೋ ಯಾತ್ರೆ ಕೀ ಜೈ, ರಾಹುಲ್ ಗಾಂಧಿ ಕೀ ಜೈ ಎಂದು ಜೈಕಾರಗಳು ಮೊಳಗಿದವು. ಜನಸಾಗರದತ್ತ ಕೈ ಬೀಸುತ್ತಾ ಪಾದಯಾತ್ರೆಯಲ್ಲಿ ರಾಹುಲ್ ಮುನ್ನಡೆಯುತ್ತಿದ್ದರು. ಪೊಲೀಸರು ಎರಡೂ ಕಡೆ ಹಗ್ಗ ಹಿಡಿದುಕೊಂಡು ಸಾರ್ವಜನಿಕರನ್ನು ನಿಯಂತ್ರಿಸುತ್ತಾ ಪಾದಯಾತ್ರೆ ಸುಗಮವಾಗಿ ನಡೆಯುವುದಕ್ಕೆ ನೆರವಾದರು.ದೆಹಲಿ ಅಬಕಾರಿ ಹಗರಣ – ದೆಹಲಿ, ಆಂಧ್ರ, ಪಂಜಾಬ್ ನ 35 ಕಡೆ ಇಡಿ ದಾಳಿ
ಪಾದಯಾತ್ರೆಯಲ್ಲಿ ಮಾಜಿ ಸಚಿವರಾದ ಎನ್. ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಧ್ರುವನಾರಾಯಣ್, ಶಾಸಕ ಪ್ರಿಯಾಂಕ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೆವಾಲ, ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸೇರಿದಂತೆ ಸಹಸ್ರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು