January 8, 2025

Newsnap Kannada

The World at your finger tips!

bike charge

ಎಲೆಕ್ಟ್ರಿಕ್​ ಬೈಕ್​ಚಾರ್ಜಿಂಗ್​ ಸ್ಟೇಷನ್ ತೆರೆಯಲು BESCOM ಆಲೋಚನೆ

Spread the love

ಎಲೆಕ್ಟ್ರಿಕ್​ ಬೈಕ್​ ಚಾರ್ಜಿಂಗ್​ ಸ್ಟೇಷನ್ ತೆರೆಯಲು ಬೆಸ್ಕಾಂ (BESCOM )ಆಲೋಚನೆ ನಡೆಸಿದೆ.

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್​, ಡಿಸೇಲ್​ ಬೆಲೆ ದಿನದಿಂದ ದಿನಕ್ಕೆ ಗಗನ್ನಕ್ಕೇರುತ್ತಿದ್ದು ವಾಹನ ಸವಾರರನ್ನು ಸಂಕಷ್ಟಕ್ಕೆ ತಳ್ಳಿದೆ. ಪೆಟ್ರೋಲ್​ ಬೆಲೆ ಏರುತ್ತಿದ್ದಂತೆ ಭವಿಷ್ಯದ ವಾಹನಗಳೆಂದು ಕರೆಯಿಸಿಕೊಳ್ಳುತ್ತಿರುವ ವಿದ್ಯುತ್​ ಚಾಲಿತ (ಎಲೆಕ್ಟ್ರಿಕ್​ ಬೈಕ್​) ಬೈಕ್​ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ.

ಜನರು ಪೆಟ್ರೋಲ್​ ಬೆಲೆ ಏರಿಕೆಯಿಂದ ಬಚಾವ್​ ಆಗಲು ಪ್ರಸ್ತುತ ದಿನಗಳಲ್ಲಿ ಎಲೆಕ್ಟ್ರಿಕ್​ ಬೈಕ್​ ಮೊರೆ ಹೋಗಿದ್ದಾರೆ.

ದಿನ ಕಳೆದಂತೆ ನಗರದಲ್ಲಿ ಎಲೆಕ್ಟ್ರಿಕ್​ ಬೈಕ್​ ಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಬೈಕ್​ ಗಳ ಜೊತೆ ಚಾರ್ಜಿಂಗ್ ಪಾಯಿಂಟ್‌ಗಳು ಲಭ್ಯವಿಲ್ಲದೆ ಸವಾರರು ಕಿರಿಕಿರಿ ಅನುಭವಿಸುಂತಾಗಿದೆ.

ಚಾರ್ಜಿಂಗ್​ ಪಾಯಿಂಟ್​ ಸ್ಥಾಪಿಸಲು ಬೆಸ್ಕಾಂ ಚಿಂತನೆ ಸಾರ್ವಜನಿಕ ಪ್ರದೇಶಗಳಲ್ಲಿ ಇರುವಂತೆ ಅಪಾರ್ಟ್​​ಮೆಂಟ್​ಗಳಲ್ಲಿಯೂ ಚಾರ್ಜಿಂಗ್​ ಪಾಯಿಂಟ್ ಸ್ಥಾಪಿಸುವ ಬಗ್ಗೆ ಬೆಸ್ಕಾಂ ಚಿಂತನೆ ನಡೆಸುತ್ತಿದೆ.

ಬೆಸ್ಕಾಂ ಎಂಡಿ ರಾಜೇಂದ್ರ ಚೋಳನ್ ‘ಬೆಸ್ಕಾಂ ವತಿಯಿಂದ ಚಾರ್ಜಿಂಗ್​ ಪಾಯಿಂಟ್ ಸ್ಥಾಪನೆ ಮಾಡುವುದರಿಂದ ಆದಾಯವೂ ಹೆಚ್ಚುತ್ತದೆ. ಎಲೆಕ್ಟ್ರಿಕ್ ವಾಹನಗಳ‌ ಬಳಕೆಯನ್ನು ಪ್ರೋತ್ಸಾಹಿಸಿದಂತೆಯೂ ಆಗುತ್ತೆ . ಈ ಕುರಿತು ಈಗಾಗಲೇ ಅಪಾರ್ಟ್​​ಮೆಂಟ್ ಅಸೋಸಿಯೇಷನ್ ಜತೆ ಮಾತುಕತೆ ನಡೆಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಿದ್ದೇವೆ’ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!