November 16, 2024

Newsnap Kannada

The World at your finger tips!

AEE Bescom Bribe

ವಿದ್ಯುತ್ ಸಂಪರ್ಕಕ್ಕೆ 3.5 ಲಕ್ಷ ರು ಲಂಚದ ಬೇಡಿಕೆ ಇಟ್ಟಿದ್ದ ಬೆಸ್ಕಾಂ ಎಇಇ ಬಂಧನ

Spread the love

ಬೆಂಗಳೂರು : ಕಟ್ಟಡವೊಂದಕ್ಕೆ 23 ಕಿಲೋವಾಟ್‌ ಸಾಮರ್ಥ್ಯದ ವಿದ್ಯುತ್‌ ಸಂಪರ್ಕಕ್ಕೆ ಮಂಜೂರಾತಿ ನೀಡಲು 3.5 ಲಕ್ಷ ರು ಲಂಚ ಪಡೆಯುತ್ತಿದ್ದ ಬೆಸ್ಕಾಂ ಎಸ್‌-1 ಜಯನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಧನಂಜಯ ವಿ. ಮತ್ತು ಅವರ ಪರವಾಗಿ ಹಣ ಪಡೆದ ಸೈಯದ್‌ ನಿಜಾಮ್‌ ಎಂಬ ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದರು

23 ಕೆವಿ ಸಾಮರ್ಥ್ಯದ ವಿದ್ಯುತ್‌ ಸಂಪರ್ಕ ಕೋರಿ ಭರತ್‌ ಕುಮಾರ್‌ ಎನ್‌.ಎಂ. ಎಂಬ ಎಲೆಕ್ಟ್ರಿಕ್‌ ಕಾಮಗಾರಿಗಳ ಗುತ್ತಿಗೆದಾರ ಬೆಸ್ಕಾಂನ ಜಯನಗರ ಉಪ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಮಂಜೂರಾತಿ ನೀಡಲು 13 ಲಕ್ಷ ರು ಲಂಚ ನೀಡುವಂತೆ ಧನಂಜಯ ಬೇಡಿಕೆ ಇಟ್ಟಿದ್ದರು. 3.5 ಲಕ್ಷವನ್ನು ಬುಧವಾರವೇ ತಲಪಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು.

ಭರತ್‌ ಕುಮಾರ್‌ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರಿಗೆ ದೂರು ನೀಡಿದ್ದರು.

ಬೆಸ್ಕಾಂನ ಜಯನಗರ ಉಪ ವಿಭಾಗದ ಕಚೇರಿಯಲ್ಲಿ ದೂರುದಾರರು ಲಂಚದ ಹಣದೊಂದಿಗೆ ಧನಂಜಯ ಅವರನ್ನು ಬುಧವಾರ ಸಂಜೆ 4 ಗಂಟೆಗೆ ಭೇಟಿಮಾಡಿದ್ದರು. ಮಳವಳ್ಳಿ ತಾಲ್ಲೂಕು ಕಚೇರಿ ಪರಿಶೀಲಿಸಿದ ಮಂಡ್ಯ ಡಿಸಿ

ಲಂಚದ ಹಣವನ್ನು ಅಲ್ಲಿಯೇ ಇದ್ದ ಸೈಯದ್ ನಿಜಾಮ್‌ ಅವರಿಗೆ ತಲುಪಿಸುವಂತೆ ಅಧಿಕಾರಿ ಸೂಚಿಸಿದರು.

ಅದರಂತೆಯೇ ಭರತ್‌ ಕುಮಾರ್‌ ಹಣವನ್ನು ನೀಡಿದರು. ತಕ್ಷಣ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಧನಂಜಯ ಮತ್ತು ಸೈಯದ್ ನಿಜಾಮ್‌ ಇಬ್ಬರನ್ನೂ ಬಂಧಿಸಿದರು ಎಂದು ಲೋಕಾಯುಕ್ತ ಪೊಲೀಸ್‌ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್‌ಪಿ ಕೆ.ವಿ. ಅಶೋಕ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ವೆಂಕಟೇಶ್‌ ಕೆ., ವಿಜಯಕೃಷ್ಣ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Bescom AEE arrested for demanding Rs 3.5 lakh bribe for electricity connection – ವಿದ್ಯುತ್ ಸಂಪರ್ಕಕ್ಕೆ 3.5 ಲಕ್ಷ ರು ಲಂಚದ ಬೇಡಿಕೆ ಇಟ್ಟಿದ್ದ ಬೆಸ್ಕಾಂ ಎಇಇ ಬಂಧನ #bescom #AEE #karnataka

Copyright © All rights reserved Newsnap | Newsever by AF themes.
error: Content is protected !!