ದುಬೈನ ಅಲ್ ಶೇಕ್ ಝಹೇಜ್ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ೨೦೨೦ ರ ೧೩ನೇ ಸರಣಿಯ ಮೂರನೇ ದಿನದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಭರ್ಜರಿ ಗೆಲುವನ್ನು ಸಾಧಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ತಂಡ ರಾಯಲ್ ಚಾಲೆಂಜರ್ಸ್ ತಂಡದ ಬಲವಾದ ಪೈಪೋಟಿಯನ್ನು ಎದುರಿಸಬೇಕಾಯಿತು. ರಾಯಲ್ ಚಾಲೆಂಜರ್ಸ್ ಪರ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ದೇವದತ್ ಪಡಿಕ್ಕಲ್ ಹಾಗೂ ಎ.ಫಿಂಚ್ ಅವರು ಆಕರ್ಷಣೀಯ ಆಟ ಪ್ರಾರಂಭಿಸಿದರು. ಆದರೆ ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡದ ಮಿಚೆಲ್ ಮಾರ್ಷ್ ಅವರು ಆರಂಭಿಕ ಬ್ಯಾಟ್ಸ್ ಮನ್ ಗಳಿಗೆ ಬೌಲಿಂಗ್ ಮಾಡುವಾಗ ಅವರ ಕಾಲು ಉಳುಕಿತು. ಇದರಿಂದ ಸನ್ ರೈಸರ್ಸ್ ತಂಡದಲ್ಲಿ ತಂಡದಲ್ಲಿ ಚಿಂತೆ ಮನೆ ಮಾಡಿತು. ರಾಯಲ್ ಚಾಲೆಂಜರ್ಸ್ ನ ಡಿ. ಪಡಿಕ್ಕಲ್ ೫೬(೪೨) ರನ್ನು ಹಾಗೂ ಎಬಿ ಡೀ ವಿಲಿಯರ್ಸ್ ೫೧ (೩೦) ರನ್ ಗಳಿಕೆ ಮಾಡಿ ತಂಡವನ್ನು ಗಟ್ಟಿಗೊಳಿಸಿದರು. ಅತಿ ನಿರೀಕ್ಷಿತ ಆಟಗಾರ, ತಂಡದ ನಾಯಕ ವಿರಾಟ್ ಕೊಹ್ಲಿಯವರು ಮಾತ್ರ ಕೇವಲ ೧೪ (೧೩) ರನ್ ಗಳಿಗೆ ಪೆವಿಲಿಯನ್ ಸೇರಿದರು. ರಾಯಲ್ ಚಾಲೆಂಜರ್ಸ್ ೨೦ ಓವರ್ ಗಳಲ್ಲಿ (೫ ವಿಕೆಟ್ ಗಳ ನಷ್ಟಕ್ಕೆ) ೧೬೩ ರನ್ ಗಳಿಸಿತು.
ನಂತರ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡದ ನಾಯಕ ಡಿ. ವಾರ್ನರ್ ಕೇವಲ ೬ ರನ್ ಗಳಸಿ ರನ್ ಔಟ್ ಆದರು. ಇದರಿಂದ ಅಭಿಮಾನಿಗಳಿಗೆ ತೀರಾ ಪಿಚ್ಚೆನಿಸಿತು. ಆದರೆ ತಂಡಕ್ಕೆ ಬಲ ತಂದು ಕೊಟ್ಟದ್ದು, ಜೆ. ಬೋರ್ಸ್ಟೋವ್ ಅವರ ಬ್ಯಾಟಿಂಗ್. ೬೧(೪೩) ರನ್ ಗಳನ್ನ ಗಳಿಸಿ ತಂಡಕ್ಕೆ ಕೊಟ್ಟರು ಬೋರ್ಸ್ಟೋವ್. ಆದರೂ ತಂಡ ಅಂಕ ಗಿಟ್ಟಿಸಿಕೊಳ್ಳವಲ್ಲಿ ಬಹಳ ಶ್ರಮ ಪಟ್ಟಿತು. ಆದರೆ ಆ ಶ್ರಮ ಫಲ ನೀಡಲಿಲ್ಲ. ತಂಡವು ೧೦ ವಿಕೆಟ್ ಗಳ ನಷ್ಟಕ್ಕೆ ೧೫೩ ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ರಾಯಲ್ ಚಾಲೆಂಜರ್ಸ್ ನಯುಜೇಂದ್ರ ಚಹ್ವಾಲ್, ಉಮೇಶ್ ಯಾದವ್, ಶಿವಮ್ ದುಬೆ ಅವರ ಬೌಲಿಂಗ್ ಗೆ ಸನ್ ರೈಸರ್ಸ್ ಆಟಗಾರರು ಕಂಗಾಲಾದದ್ದಂತೂ ಸುಳ್ಳಲ್ಲ.
ಐಪಿಎಲ್ – ೨೦೨೦ರ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಅತ್ಯಾಕರ್ಷಕವಾಗಿ ತನ್ನ ಪ್ರದರ್ಶನವನ್ನು ನೀಡಿದೆ. ಈ ಸಲ ಕಪ್ ನಮ್ಮದೇನಾ?
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ