ಬೆಂಗಳೂರಿನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆ ಸಹಾಯದಿಂದ ಬಾಂಬ್ ಸ್ಪೋಟಿಸುವುದಾಗಿ ಕಾಕಿನಾಡ್ ಕೆವಿಸಿಯ ಸಿಇಒ ಹಾಗೂ ಸಂಸ್ಥಾಪಕ ಎನ್ನಲಾದ ಶ್ರೀಪಾದ್ ಎಂಬಾತ ನಿರ್ವಹಣೆ ಮಾಡುತ್ತಿರುವ `ಗುರುಕೇರಳ‰ರಾಮೇಶ್ವರ’ ಟ್ವೀಟರ್ ಖಾತೆಯಲ್ಲಿ ಬೆದರಿಕೆ ಟ್ವೀಟ್ ಪೋಸ್ಟ್ ಆಗಿದೆ.
ನಾನು ಬೆಂಗಳೂರಿಗೆ ಭೇಟಿ ನೀಡುತ್ತಿದ್ದೇನೆ. ಬೆಂಗಳೂರು ಮೆಟ್ರೊ ಹಾಗೂ ಯಶವಂತಪುರದ ರೈಲ್ವೆ ನಿಲ್ದಾಣಗಳಿಗೆ ವಾರದೊಳಗೆ ಸೂಕ್ತ ಭದ್ರತೆ ಕೈಗೊಳ್ಳಿ. ಐಎಸ್ ಸಹಾಯದಿಂದ ಬಾಂಬ್ ಸ್ಪೋಟಿಸಿ ವಿಮಾನ ಹಾಗೂ ರೈಲುಗಳನ್ನು ಸುಟ್ಟು ಹಾಕುತ್ತೇನೆ ಎಂದು ಟ್ವೀಟ್‍ನಲ್ಲಿ ಬರೆಯಲಾಗಿದೆ.
ಈ ಕುರಿತು ರಾಜ್ಯದ ಎಲ್ಲ ನಗರಗಳ ಪೊಲೀಸ್ ಕಮಿಷನರ್, ಎಸ್‍ಪಿ, ರೈಲ್ವೆ ಹಾಗೂ ವಿಮಾನ ನಿಲ್ದಾಣದ ರಕ್ಷಣಾ ಪಡೆಗಳ ಅಧಿಕಾರಿಗಳಿಗೆ ತುರ್ತು ಸಂದೇಶ ಕಳುಹಿಸಲಾಗಿದ್ದು, ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳುವಂತೆ ಕೇಂದ್ರ ಗುಪ್ತದಳದ ಅಧಿಕಾರಿಗಳು ಎಚ್ಚರಿಸಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ