ಬೆಂಗಳೂರು : ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕರಾವಳಿ ಪ್ರಸಿದ್ಧ ಕಂಬಳವನ್ನು ಆಯೋಜನೆ ಮಾಡಿದ್ದು, ಕಾಂತಾರ ಸಿನೆಮಾದಲ್ಲಿ ನಟ ರಿಷಭ್ ಶೆಟ್ಟಿ ಓಡಿಸಿದ್ದ ಕೋಣಗಳು ಇಂದು ನಡೆದ ಬೆಂಗಳೂರು ಕಂಬಳ ಕ್ರೀಡೆಯಲ್ಲಿ ಮೊದಲ ಸ್ಥಾನ ಪಡೆದು ಪದಕ ಗೆದ್ದಿವೆ.
ಉಡುಪಿ ಜಿಲ್ಲೆಯ ಬೈಂದೂರಿನ ಪರಮೇಶ್ವರ್ ಭಟ್ ಅವರ ಅಪ್ಪು ಮತ್ತು ಕಿಟ್ಟಿ ಕೋಣಗಳು ಬೆಂಗಳೂರು ಕಂಬಳದಲ್ಲಿ ಭಾಗಿಯಾಗಿದ್ದವು. ಕಾಂತಾರ ಸಿನಿಮಾದಲ್ಲಿ ಈ ಕೋಣಗಳು ಕಾಣಿಸಿಕೊಂಡಿದ್ದವು.ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಅಪ್ಪು ಮತ್ತು ಕಿಟ್ಟಿ ಎಂಬ ಕೋಣಗಳನ್ನು ಓಡಿಸಿ ಬಹುಮಾನವನ್ನು ಗೆಲ್ಲುತ್ತಾರೆ. ಇದೇ ಕೋಣಗಳು ಬೆಂಗಳೂರಿನ ಕಂಬಳ ಕ್ರೀಡೆಯಲ್ಲೂ ಮೊದಲ ಸ್ಥಾನ ಗೆದ್ದಿವೆ. ಮುಂಬಯಿ ದಾಳಿಗೆ 15 ವರ್ಷದ ಕರಾಳ ನೆಪ : 166 ಮಂದಿಯನ್ನು ಹತ್ಯೆ ಮಾಡಿದ ಪಾಪಿಸ್ತಾನದ ಭಯೋತ್ಪಾದಕರು
ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಬೆಂಗಳೂರು ಕಂಬಳ ಕ್ರೀಡೆಯಲ್ಲಿ ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಓಡಿಸಿದ್ದ ಅಪ್ಪು-ಕಿಟ್ಟಿ ಎಂಬ ಕೋಣಗಳು ಕನೆಹಲಗೆ ವಿಭಾಗದಲ್ಲಿ ಪದಕ ಗೆದ್ದುಕೊಂಡಿದೆ.
More Stories
ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ