ಬಂಗಾಳದ ಉಪ ಚುನಾವಣೆ : ಮಮತಾ ನಾಮಪತ್ರ ಸಲ್ಲಕೆ – ಬಿಜೆಪಿಯಿಂದ ಪ್ರಿಯಾಂಕಾ ಕಣಕ್ಕೆ

Team Newsnap
0 Min Read

ಪಶ್ಚಿಮ ಬಂಗಾಳದ ಭಬನಿಪುರ ಕ್ಷೇತ್ರದ ಉಪ ಚುನಾವಣೆಗೆ ಸಿಎಂ ಮಮತಾ ಬ್ಯಾನರ್ಜಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಮಮತಾ ಬ್ಯಾನರ್ಜಿ ಅವರಿಗೆ ಭಬನಿಪುರ ಕ್ಷೇತ್ರದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಒಂದೊಮ್ಮೆ ಚುನಾವಣೆ ಸೋತರೆ ಮುಖ್ಯಮಂತ್ರಿ ಸ್ಥಾನದಿಂದ ಅವರು ಕೆಳಗಿಳಿಯ ಬೇಕಾಗುತ್ತೆ.

ಈ ಹಿನ್ನಲೆ ಉಪಚುನಾವಣೆ ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಈ ನಡುವೆ ಬಿಜೆಪಿಯಿಂದ ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕೆ ಇಳಿಯುವ ಅಭ್ಯರ್ಥಿ ಹೆಸರು ಘೋಷಣೆಯಾಗಿದೆ.‌ ವೃತ್ತಿಯಲ್ಲಿ ವಕೀಲೆಯಾಗಿರುವ ಕೋಲ್ಕತ್ತಾ ಮೂಲದ ಪ್ರಿಯಾಂಕ ತಿಬ್ರಿವಾಲ್ ಬಿಜೆಪಿ ಟಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

TAGGED:
Share This Article
Leave a comment