December 24, 2024

Newsnap Kannada

The World at your finger tips!

palak newsnap

ಆರೋಗ್ಯವರ್ಧಕ ಗುಣಗಳ ಪಾಲಕ್ ( Spinach) ಸೊಪ್ಪಿನ ಬಗ್ಗೆ ನಿಮಗೆಷ್ಟು ಗೊತ್ತು ?

Spread the love

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹಳ ಮುಖ್ಯ. ಅದರಲ್ಲೂ (Spinach) ಪಾಲಾಕ್ ಸೊಪ್ಪು ಅತಿ ಹೆಚ್ಚು ಆರೋಗ್ಯವರ್ಧಕ ಗುಣಗಳನ್ನು ಹೊಂದಿದೆ.

ಪಾಲಕ್ (Spinach) ಸೊಪ್ಪಿನಲ್ಲಿ ಹೇರಳವಾಗಿ ನಾರಿನಂಶ,ಪ್ರೋಟಿನ್‍ಗಳು ಇವೆ. ಮುಖ್ಯವಾಗಿ ಇದರಲ್ಲಿ ಕಬ್ಬಿಣಾಂಶ ಇದೆ. ಪಾಲಕ್ ಸೊಪ್ಪಿನಲ್ಲಿ ಸಹಜವಾದ ಔಷಧೀಯ ಗುಣಗಳಿವೆ.

ದೇಹದ ಫಿಟ್ನೆಸ್ ಹಾಗೂ ಆರೋಗ್ಯ ಎನ್ನುವುದು ಪ್ರತಿಯೊಬ್ಬರಿಗೂ ಅತೀ ಅನಿವಾರ್ಯವಾಗಿರುವುದು. ಹೀಗಾಗಿ ನಮ್ಮ ಜೀವನಶೈಲಿ, ಆಹಾರ ಕ್ರಮದಿಂದ ಆರೋಗ್ಯ ಕಾಪಾಡಬಹುದು. ಪ್ರತಿನಿತ್ಯ ಪಾಲಕ್ ಸೇವನೆಯಿಂದ ನಮ್ಮ ದೇಹದಲ್ಲಿ ರಕ್ತದ ಚಲನೆಯನ್ನು ಸರಾಗವಾಗಿಸಬಹುದು.

ಕೆಲವೊಂದು ತರಕಾರಿಗಳ ಬಳಕೆ ಮಾಡಿಕೊಂಡರೆ ಖಂಡಿತವಾಗಿಯೂ ಉತ್ತಮ ಆರೋಗ್ಯಕ್ಕೆ ಇದು ತುಂಬಾ ಸಹಕಾರಿ. ಇಂತಹ ತರಕಾರಿಗಳಲ್ಲಿ ಹಸಿರೆಲೆ ತರಕಾರಿಗಳು ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ನೀಡುವುದು. ಅದರಲ್ಲಿ ಪಾಲಕ್ ಸೊಪ್ಪು ಒಂದಾಗಿದೆ.

ದಿನನಿತ್ಯದ ಆಹಾರದಲ್ಲಿ ಪಾಲಕ್ ಸೊಪ್ಪನ್ನು ಸೇರಿಸುವುದರಿಂದ ಮೂಳೆಗಳನ್ನು ಗಟ್ಟಿಗೊಳಿಸಬಹದು. ಇದರಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೀಲು ನೋವು ಹಾಗೂ ಇತರೆ ಮೂಳೆ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ.

ಕೂದಲ ಬೆಳವಣಿಗೆಗೂ ಬಹಳ ಒಳ್ಳೆಯದು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ,ಸಿ,ಇ ಪೊಟ್ಯಾಷಿಯಂ,ಕಬ್ಬಿಣ ಮತ್ತು ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ ಈ ಅಂಶಗಳು, ಕೂದಲ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲು ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ಕೆಂಪು ರಕ್ತಕಣಗಳನ್ನು ಬಲಪಡಿಸಿ ಆಮ್ಲಜನಕವನ್ನು ಪ್ರತಿ ಕೂದಲ ಬುಡಕ್ಕು ತಲುಪಿಸಲು ಸಹಾಯಕಾರಿ ಆಗಿದೆ.

ಪಾಲಕ್ (Spinach) ಸೊಪ್ಪಿನ ನಿಯಮಿತ ಸೇವನೆಯಿಂದ ಕೂದಲ ಉದುರುವಿಕೆಯನ್ನು ತಡೆಯಬಹುದು. ಕೂದಲು ಉದುರುವುದಕ್ಕೆ ಮುಖ್ಯ ಕಾರಣವೆಂದರೆ ಕೂದಲ ಬುಡದಲ್ಲಿ ಕಬ್ಬಿಣ ಅಂಶದ ಕೊರತೆಯಿಂದ ಪಾಲಕ್ ಸೊಪ್ಪು ಕಬ್ಬಿಣದ ಅಂಶವನ್ನು ಕೂದಲ ಬುಡಕ್ಕೆ ಒದಗಿಸುವುದರಿಂದ ಕೂದಲು ಉದುರುವುದು ಕ್ರಮೇಣ ಕಡಿಮೆ ಆಗುತ್ತದೆ.

ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಿರುವ ಹಾನಿಕಾರಕ ಅತಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುವುದರ ಜೊತೆಗೆ ಪಾಲಕ್ ಸೊಪ್ಪು ಕ್ಯಾನ್ಸರ್ ಮತ್ತು ವೃದ್ಧಾಪ್ಯ ಬರದಂತೆ ತಡೆಯುತ್ತದೆ.

ಪಾಲಕ್ (Spinach) ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಎ ಇರುವುದರಿಂದ ಇವುಗಳು ತ್ವಚೆಯ ಸೆಳೆತ ಮತ್ತು ಕಾಂತಿ ಹೆಚ್ಚಿಸಲು ನೆರವಾಗುತ್ತದೆ, ಹಾಗೆಯೇ ವಿಟಮಿನ್ ಸಿ ಹೊಸ ಜೀವಕೋಶಗಳ ಹುಟ್ಟಿಗೆ ನೆರವಾಗುತ್ತದೆ.

ಪಾಲಕ್ ಸೊಪ್ಪಿನಲ್ಲಿರುವ ಅಂಶಗಳು ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುವುದಕ್ಕೆ ತುಂಬಾ ಒಳ್ಳೆಯದು.

ಪಾಲಕ್ ಸೊಪ್ಪು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ಇಳಿಸಲು ಸಹಾಯ ಮಾಡುತ್ತದೆ. ದೇಹಕ್ಕೆ ಅಗತ್ಯವಿರುವ ಹೆಚ್ಚಿನ ಪೋಷಕಾಂಶಗಳು ಒದಗಿಸುತ್ತದೆ.

ಪಾಲಕ್ (Spinach) ಜ್ಯೂಸ್

palka juice

ಪಾಲಕ್ ಜ್ಯೂಸ್ ತಯಾರಿಸಲು ನೀವು ಮೊದಲಿಗೆ ಎರಡು ಕಟ್ ಪಾಲಕ್ ನ್ನು ತೊಳೆದು ಬಳಿಕ ಸಣ್ಣದಾಗಿ ಕತ್ತರಿಸಿಕೊಳ್ಳಿ. ಒಂದು ಸೇಬನ್ನು ಕೂಡ ಕತ್ತರಿಸಿ ಇದನ್ನು ಜ್ಯೂಸರ್ ಗೆ ಹಾಕಿಕೊಳ್ಳಿ. ¾ ಕಪ್ ನೀರು ಹಾಕಿ.ಮತ್ತು ಒಂದು ಚಮಚ ಲಿಂಬೆರಸ ಹಾಕಿ. ಜ್ಯೂಸ್ ಮಾಡಿ, ಬಳಿಕ ಸೋಸಿಕೊಂಡು ಅದನ್ನು ಲೋಟಕ್ಕೆ ಹಾಕಿ. ಇದರ ಬಳಿಕ ನೀವು ಸೇವಿಸಬಹುದು.

ಒಂದು ಲೋಟ ಪಾಲಕ್ ಜ್ಯೂಸ್ ಸೇವನೆ ಮಾಡಿದರೆ ಅದರಿಂದ ನಿಮಗೆ ಹಲವಾರು ರೀತಿಯ ಲಾಭಗಳು ಸಿಗುವುದು.

ಪಾಲಕ್ ಪರೋಟ (Palak Parotta)

  1. ಒಂದು ಮಿಕ್ಸರ್ ಪಾತ್ರೆಗೆ ಪಾಲಕ್ ಸೊಪ್ಪನ್ನು ಸೇರಿಸಿ, ನುಣುಪಾಗಿ ರುಬ್ಬಿಕೊಳ್ಳಿ.-
  2. ನಂತರ ಪಾಲಕ್ ಪೇಸ್ಟ್ ಅನ್ನು ಒಂದೆಡೆ ಇಡಿ.
  3. ಒಂದು ದೊಡ್ಡ ಪಾತ್ರೆಯಲ್ಲಿ
    • ಗೋಧಿ ಹಿಟ್ಟು, ಸ್ವಲ್ಪ
    • ಉಪ್ಪು,
    • ಓಂಕಾಳು,
    • ರುಬ್ಬಿಕೊಂಡ ಪಾಲಕ್ ಸೊಪ್ಪಿನ ಪೇಸ್ಟ್ ಸೇರಿಸಿ ಮಿಶ್ರಗೊಳಿಸಿ.-
  4. ನಂತರ ಅಗತ್ಯಕ್ಕೆ ತಕ್ಕಷ್ಟು ಹಾಲನ್ನು ಸೇರಿಸಿ, ಮೃದುವಾಗಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ.
  5. ನಂತರ ನಾದಿದ ಚಪಾತಿ ಹಿಟ್ಟನ್ನು ಸಣ್ಣ ಸಣ್ಣ ಉಂಡೆಯ ಗಾತ್ರ ಮಾಡಿ.
  6. ಬಳಿಕ ಗೋಧಿ ಹಿಟ್ಟಿನಲ್ಲಿ ಅದ್ಧಿಕೊಂಡು ಉಂಡೆಯನ್ನು ಪರೋಟಾದ ಆಕೃತಿಯಲ್ಲಿ ಲಟ್ಟಿಸಿ.
  7. ಒಂದು ತವವನ್ನು ಸ್ಟವ್ ಮೇಲೆ ಇಟ್ಟು.- ಲಟ್ಟಿಸಿಕೊಂಡ ಪರೋಟಾ ಅನ್ನು ಹಾಕಿ ಬೇಯಿಸಿ.- ಪರೋಟಾ ಎರಡು ಭಾಗದಲ್ಲಿ ಮೃದುವಾಗಿ ಚೆನ್ನಾಗಿ ಬೇಯಿಸಿ.

ಹಾಗಲಕಾಯಿ (Bitter gourd) ಕಹಿಯಾದರೂ ಅಮೃತ

Copyright © All rights reserved Newsnap | Newsever by AF themes.
error: Content is protected !!