ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನವೊಂದು ಬಳ್ಳಾರಿ ನಾಲಾಗೆ ಬಿದ್ದ ಪರಿಣಾಮ, 7 ಮಂದಿ ಸ್ಥಳದಲ್ಲೇ ಹಾಗೂ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಬೆಳಗಾವಿ ತಾಲೂಕಿನ ಕಣಬರಗಿ ಬಳಿಯ ಕಲ್ಯಾಳ ಪುಲ್ ಬಳಿ ನಡೆದಿದೆ.ಇದನ್ನು ಓದಿ –ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ ದೃಢ
ಅಕ್ಕ-ತಂಗಿಯರ ಹಾಳದಿಂದ ಬೆಳಗಾವಿಗೆ ಕೂಲಿ ಕೆಲಸದವರನ್ನು ಕ್ರೂಸರ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಪಲ್ಟಿ ಹೊಡೆದು ನಾಲೆಗೆ ಬಿದ್ದಾಗ ಘಟನೆ ನಡೆದಿದೆ.ಫಕ್ಕೀರಪ್ಪ ಹರಿಜನ, ಅಡಿಯಪ್ಪ ಚಲಬಾವಿ ಬಸವರಾಜ್ ದಳವಿ, ಮಲ್ಲಪ್ಪ
ಆಕಾಶ್ ರಾಮಣ್ಣ ಗತ್ತಿಬಸವರಾಜ್ ಹನುಮನ್ನವರ್ ಸೇರಿಂತೆ 9 ಮಂದಿ ಸಾವನ್ನಪ್ಪಿದ್ದಾರೆ.
ಈ ಕ್ರೂಸರ್ ನಲ್ಲಿ 18 ಮಂದಿ ಕೂಲಿ ಕೆಲಸಕ್ಕೆ ಹೋಗುವವರು ಪ್ರಯಾಣ ಮಾಡುತ್ತಿದ್ದರು. 10 ಮಂದಿ ಗಾಯಗೊಂಡಿದ್ದಾರೆ .ಸ್ಥಳಕ್ಕೆ ಬೆಳಗಾವಿ ಪೋಲಿಸ್ ಆಯುಕ್ತ ಬೋರಲಿಂಗಯ್ಯ ಭೇಟಿ ಪರಿಶೀಲನೆ ಮಾಡಿದರು. ಮಾರಿಹಾಳ್ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು