ಬೆರಗು

Team Newsnap
0 Min Read
WhatsApp Image 2023 08 06 at 10.28.34 AM
ಎಸ್ ಬಿ ಪ್ರಿಯಾಕಾರಿಣಿ

ಇರುಳಲಷ್ಟೇ ಬಿರಿಯುವ
ಮೊಗ್ಗಿಗೂ ಸಿಗ್ಗು ತಂದು
ಹೆಣ್ತನದ ಹೆಬ್ಬಯಕೆಯ
ಪುಷ್ಪದೊಳಗಿಟ್ಟವರಾರು?

ಅಗೋಚರ ಆವಿಯಾಗಿ
ಕಾರ್ಮೋಡದೊಳು ಕುಳಿತ
ರೂಪವಿರದ ಆ ಹನಿಯೊಳು
ಜೀವಕಳೆಯ ತುಂಬಿದವರಾರು?

ಬಿದ್ದ ಮಳೆ ಹನಿಯಾಗಿ
ನದಿಯಾಗಿ ಕಡಲ ತಾ ಸೇರಿ
ಮತ್ತೆ ಕಾರ್ಮೋಡವಾಗುವ
ರೂಪಾಂತರ ರೂಪಿಸಿದವರಾರು?

Share This Article
Leave a comment