ಪುರುಷ-ಮಹಿಳಾ ಕ್ರಿಕೆಟರ್ಸ್​ಗೆ ಸಮಾನ ವೇತನ ನೀಡಲು ಐತಿಹಾಸಿಕ ನಿರ್ಣಯ ಮಾಡಿದ BCCI

Team Newsnap
1 Min Read

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯು ಪುರುಷ ಮತ್ತು ಮಹಿಳಾ ಕ್ರಿಕೆಟ್ ಆಟಗಾರರಿಗೆ ಸಮಾನ ಪಂದ್ಯದ ವೇತನ ನೀಡುವ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ.

ಬಿಸಿಸಿಐ ಕೇಂದ್ರೀಯ ಒಪ್ಪಂದಕ್ಕೆ ಒಳಪಟ್ಟ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಆಟಗಾರರಿಗೆ ಸಮಾನ ಪಂದ್ಯದ ವೇತನ ನೀಡಲು ಅಪೆಕ್ಸ್ ಬೋರ್ಡ್ ನಿರ್ಧಾರ ಕೈಗೊಂಡಿದೆ. ಬಿಸಿಸಿಐ ನಡೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.ಮಂಡ್ಯದ ನೂತನ ಜಿಲ್ಲಾಧಿಕಾರಿಯಾಗಿ ಡಾ.ಹೆಚ್. ಎನ್.ಗೋಪಾಲ ಕೃಷ್ಣ ಅಧಿಕಾರ ಸ್ವೀಕಾರ

ಟೆಸ್ಟ್ ಪ್ರತಿ ಪಂದ್ಯಕ್ಕೆ 15 ಲಕ್ಷ, ಏಕದಿನದ ಪ್ರತಿ ಪಂದ್ಯಕ್ಕೆ 6 ಲಕ್ಷ, ಟಿ20 ಪ್ರತಿ‘ ಪಂದ್ಯಕ್ಕೆ 3 ಲಕ್ಷ ವೇತನ ನೀಡಲು ಬಿಸಿಸಿಐ ನಿರ್ಧರಿಸಿದೆ.

ಪುರುಷ ಮತ್ತು ಮಹಿಳಾ ಆಟಗಾರರ ನಡುವಿನ ವೇತನ ತಾರತಮ್ಯವನ್ನು ಹೋಗಲಾಡಿಸಲು ಮಂಡಳಿ ಸೂಕ್ತ ಕ್ರಮಕ್ಕೆ ಮುಂದಾಗಿದೆ. ಹಾಗೆಯೇ ಒಪ್ಪಂದ ಹೊಂದಿರುವ ಮಹಿಳಾ ಕ್ರಿಕೆಟರ್ಸ್​​ಗೆ ವೇತನ ಇಕ್ವಿಟ್​ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಟ್ವೀಟ್​ ಮಾಡಿದ್ದಾರೆ.

Share This Article
Leave a comment