ಶಾಂತಿನಗರದಲ್ಲಿ ಶಾಸಕ ಹ್ಯಾರಿಸ್ ಪ್ರತಿಮೆ ತೆರವು ಮಾಡಿದ ಬಿಬಿಎಂಪಿ

Team Newsnap
1 Min Read

ಕಳೆದ ಆರು ತಿಂಗಳ ಹಿಂದೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ಎಲ್.ಆರ್ ಮುಖ್ಯರಸ್ತೆಯ ಹ್ಯಾರಿಸ್ ವೃತ್ತದಲ್ಲಿದ್ದ ಶಾಸಕ ಎನ್​​.ಎ ಹ್ಯಾರಿಸ್​ ಪ್ರತಿಮೆ(ಗಾಜಿನ‌ ಬಾಕ್ಸ್​​ನಲ್ಲಿಟ್ಟಿದ್ದ ಹ್ಯಾರಿಸ್ ಫೋಟೋ)ವನ್ನ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಸರ್ಕಾರದ ಅನುಮತಿಯಿಲ್ಲದೆ ಹ್ಯಾರಿಸ್ ಪ್ರತಿಮೆ ಇಟ್ಟಿರುವ ಕಾರಣಕ್ಕಾಗಿ ನಿನ್ನೆ ಮಧ್ಯಾಹ್ನ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪ್ರತಿಮೆ ತೆರವು ಮಾಡಿದ್ದಾರೆ.

ಇತ್ತೀಚೆಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಜೃತ ಕನ್ನಡದ ಮೇರು ನಟ ರಾಜಕುಮಾರ್ ಪುತ್ಥಳಿ ಕಾಮಗಾರಿ ವಿಚಾರದಲ್ಲಿ ಶಾಸಕ ಹ್ಯಾರಿಸ್ ಹಗುರವಾಗಿ ಮಾತನಾಡಿದ್ದರು.
ತಮ್ಮದೇ ಪ್ರತಿಮೆ ಸ್ಥಾಪಿಸಿ, ಹ್ಯಾರಿಸ್​ ಸರ್ಕಲ್ ಎಂದು ಹೆಸರಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು.

ದೊಮ್ಮಲೂರಿನಲ್ಲಿ ಬಿಬಿಎಂಪಿ ವತಿಯಿಂದ ಡಾ.ರಾಜ್‌ ಪುತ್ಥಳಿ ಸ್ಥಾಪನೆ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳ ಜೊತೆ ತೆರಳಿದ್ದ ಹ್ಯಾರಿಸ್‌, ಆ ದಿನ ಯಾರೋ ರಾಜ್ ಕುಮಾರ್ ಅಂತೆ, ಇಲ್ಲಿ ಪ್ರತಿಮೆ ಮಾಡೋದೆ ದೊಡ್ಡ ಕಥೆ, ಅದಕ್ಕೆ ಆಫೀಸ್ ಬೇರೆ ಕಟ್ಟೋಕಾಗುತ್ತಾ? ಅವರ್ಯಾರೋ ಪ್ರತಿಮೆ ಅಂತ ಮಾಡಿರ್ತಾರೆ. ಅದಕ್ಕೆ ಕವರ್ ಬೇರೆ ಮಾಡ್ಬೇಕಾ? ಹಾಗೆ ಕವರ್ ಮಾಡಬೇಕು ಪ್ರೊಟೆಕ್ಷನ್​​​ಗೆ ಅನ್ನುವುದಾದರೆ ಪ್ರತಿಮೆಯನ್ನು ಮನೆಯಲ್ಲಿಯೇ ಇಟ್ಕೊಂಡಿರ್ಬೇಕು. ರಸ್ತೆಯಲ್ಲಿ ಯಾಕೆ ಇಡಬೇಕು ಎಂದು ಹ್ಯಾರಿಸ್ ಹೇಳಿದ್ದರು.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅಣ್ಣಾವ್ರ ಅಭಿಮಾನಿಗಳು ಹ್ಯಾರಿಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಕೂಡಲೇ ಎಚ್ಚೆತ್ತುಕೊಂಡಿದ್ದ ಹ್ಯಾರಿಸ್ ಫೇಸ್​ಬುಕ್ ಲೈವ್ ನಲ್ಲಿ, ಅಣ್ಣಾ ಅವರ ಅಭಿಮಾನಿಗಳ ಬಳಿ ಕ್ಷಮೆಯಾಚನೆ ಮಾಡಿದ್ದರು.

ಇದೀಗ ಬಿಬಿಎಂಪಿ ಅಧಿಕಾರಿಗಳು, ಅನುಮತಿಯಿಲ್ಲದೆ ಹಾಕಿದ್ದ ಹ್ಯಾರಿಸ್ ಪ್ರತಿಮೆ‌ ತೆರವುಗೊಳಿಸುವ ಮೂಲಕ ಪ್ರತಿಮೆಗಳ ಮಹತ್ವವನ್ನು ಮತ್ತಷ್ಟು ಅರ್ಥ ಮಾಡಿಸಿದ್ದಾರೆಂದರೆ ಬಹುಶಃ ತಪ್ಪಾಗಲಾರದು.

Share This Article
Leave a comment