December 24, 2024

Newsnap Kannada

The World at your finger tips!

WhatsApp Image 2022 08 24 at 7.17.11 PM

ರಾಜ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬ್ಯಾಟರಿ ಉತ್ಪಾದನೆ – 8 ಸಾವಿರ ಕೋಟಿ ರೂ. ಹೂಡಿಕೆ

Spread the love

ಬೆಂಗಳೂರು: ಮರುಬಳಕೆ ಮಾಡಬಹುದಾದ ಎಲೆಕ್ಟ್ರಿಕ್ ಬ್ಯಾಟರಿಗಳನ್ನು ತಯಾರಿಸುವ ಅಂತಾರಾಷ್ಟ್ರೀಯ ಸಂಸ್ಥೆಯೊಂದಿಗೆ ರಾಜ್ಯ  ಸರ್ಕಾರ 8,000 ಕೋಟಿ ರೂ. ಹೂಡಿಕೆ ಒಡಂಬಡಿಕೆಗೆ ಮಂಗಳವಾರ ಸಹಿ ಹಾಕಿದೆ. 

ಕೈಗಾರಿಕಾ ಸಚಿವ ಎಂ ಬಿ ಪಾಟೀಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ಸರಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಐಬಿಸಿ ಇಂಡಿಯಾ ಪರವಾಗಿ ಅದರ ಭಾರತದ ವ್ಯವಹಾರಗಳ ಮುಖ್ಯಸ್ಥ ವೆಂಕಟೇಶ ವಲ್ಲೂರಿ ಸಹಿ ಹಾಕಿದರು.

ಮರುಬಳಕೆ ಮಾಡಬಹುದಾದಂಥ ಲಿಥಿಯಾನ್‌ ಬ್ಯಾಟರಿಗಳ ಉತ್ಪಾದನೆ ಮುಂದಿನ ಒಂದು ವರ್ಷದಲ್ಲಿ ಪ್ರಾರಂಭವಾಗಲಿದ್ದು, ಸರ್ಕಾರ ಕಾರ್ಖಾನೆ ಸ್ಥಾಪನೆಗೆ ಗ್ರಾಮಾಂತರ ಜಿಲ್ಲೆಯಲ್ಲಿ 100 ಎಕರೆ ಜಮೀನು ನೀಡಲಿದೆ.

ಇದು ರಾಜ್ಯದಲ್ಲಿ ಇಂತಹ ಎರಡನೇ ಘಟಕವಾಗಿದ್ದು, ಈ ಕ್ಷೇತ್ರದಲ್ಲಿ ರಾಜ್ಯವು ಇಡೀ ದೇಶಕ್ಕೇ ಅಗ್ರಸ್ಥಾನ ಪಡೆಯಲಿದೆ.ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ – ಹತ್ತು ಲಕ್ಷ ಹೂವಿನಲ್ಲಿ ಎದ್ದುನಿಲ್ಲಲಿದೆ ವಿಧಾನಸೌಧ

ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್‌ ಕೃಷ್ಣ, ಐಬಿಸಿ ಸಂಸ್ಥಾಪಕ ಮತ್ತು ಸಿಇಒ ಡಾ.ಪ್ರಿಯದರ್ಶಿ ಪಾಂಡಾ, ಕಂಪನಿಯ ಸಿಒಒ ಶಶಿ ಕುಪ್ಪಣ್ಣಗಾರಿ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!