ಒಳ ಮೀಸಲಾತಿಗೆ ಧಿಕ್ಕರಿಸಿದ ಬಂಜಾರ ಸಮುದಾಯ; ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ

Team Newsnap
1 Min Read
Banjara community defies internal reservation; Stone pelting on Yeddyurappa's residence ಒಳ ಮೀಸಲಾತಿಗೆ ಧಿಕ್ಕರಿಸಿದ ಬಂಜಾರ ಸಮುದಾಯ; ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ

ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಶಿಕಾರಿಪುರದ ‘ಮೈತ್ರಿ’ ನಿವಾಸದ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಜರುಗಿದೆ.

ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರು ಬಿಎಸ್​ವೈ ನಿವಾಸ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ಈ ಘಟನೆಯಲ್ಲಿ ಯಡಿಯೂರಪ್ಪನವರ ಮನೆಯ ಕಿಟಕಿಯ ಗ್ಲಾಸ್​ಗಳು ಪುಡಿ ಪುಡಿಯಾಗಿವೆ.

ಶಿಕಾರಿಪುರದಲ್ಲಿ ತಾಲೂಕು ಬಂಜಾರ ಸಮಾಜ ವತಿಯಿಂದ ಬೃಹತ್​ ಪ್ರತಿಭಟನೆಯು ಹಮ್ಮಿಕೊಂಡಿತ್ತು

ಈ ಪ್ರತಿಭಟನೆಯು ತಾರಕಕ್ಕೇರುತ್ತಿದ್ದಂತೆ ಪ್ರತಿಭಟನಾ ನಿರತರು ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೇ ಅವರ ಬಿಜೆಪಿ ಕಚೇರಿ ಮೇಲಿದ್ದ ಬಿಜೆಪಿ ಪಕ್ಷದ ಬಾವುಟ ತೆರವುಗೊಳಿಸಿ ಬಂಜಾರ ಸಮುದಾಯದ ಬಾವುಟ ಹಾರಿಸಿದ್ದಾರೆ.

ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿ, ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಿದ್ದಾರೆ. ಪೊಲೀಸರ ಸೂಚನೆ ಧಿಕ್ಕರಿಸಿ, ಏಕಾಏಕಿ ಮಾಜಿ ಸಿಎಂ ನಿವಾಸದ ಮೇಲೆ ಪ್ರತಿಭಟನಾಕಾರರು ಕಲ್ಲುತೂರಿದ್ದಾರೆ. ಇದರಿಂದ ಕೆಲ ಪೊಲೀಸ್​ ಸಿಬ್ಬಂದಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಇನ್ನು ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್​ ನಡೆಸಿದರು.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿ- ಸಿಬ್ಬಂದಿ ರವಾನಿಸಲಾಗುತ್ತಿದೆ.ಇದನ್ನು ಓದಿ –ಸಚಿವ ನಾರಾಯಣಗೌಡ ಫೋಟೋ ಇರುವ 450 ಸ್ಕೂಲ್ ಬ್ಯಾಗ್ ಜಪ್ತಿ

Share This Article
Leave a comment