ಬೆಂಗಳೂರು ಮೈಸೂರು ದಶಪಥ ಹೆದ್ದಾರಿ 2ನೇ ಟೋಲ್ ಜುಲೈ 1 ರಿಂದ ಆರಂಭ

Team Newsnap
1 Min Read

ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಶಾಕ್ ,ಇಷ್ಟು ದಿನ ಒಂದು ಟೋಲ್‌ನ ದರಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಜನರಿಗೆ ಮತ್ತೊಂದು ಟೋಲ್ ದರದ ಶಾಕ್ ಎದುರಾಗಿದೆ.

ರಾಮನಗರ ಜಿಲ್ಲೆಯ ಕಣಮಿಣಕಿ ಟೋಲ್ ಸಂಗ್ರಹ ಆರಂಭವಾಗಿದ್ದು, ಒಂದು ಕಾರಿಗೆ ಏಕಮುಖ ಸಂಚಾರಕ್ಕೆ 165 ರೂ. ಅನ್ನು ವಸೂಲಿ ಮಾಡಲಾಗುತ್ತಿದೆ. ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಟೋಲ್ ಅನ್ನು ಜುಲೈ 1ರಿಂದ ಆರಂಭಿಸಲಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಪ್ಲಾಜಾದಲ್ಲಿ ವಾಹನ ಸವಾರರು ಟೋಲ್ ಹಣ ನೀಡಬೇಕಿದೆ.

ಇಷ್ಟು ದಿನ ಯಾವುದಾದರೂ ಒಂದು ಟೋಲ್‌ನಲ್ಲಿ ಹಣ ಕಟ್ಟಿದರೆ ಆಯಿತು ಎಂದುಕೊಂಡಿದ್ದರು. ಆದರೆ ಹೆದ್ದಾರಿ ಪ್ರಾಧಿಕಾರ ಎರಡು ಟೋಲ್‌ಗಳಿಗೂ ಪ್ರತ್ಯೇಕ ಟೋಲ್ ದರವನ್ನು ನಿಗದಿ ಮಾಡಿದೆ.

ಉದಾಹಾರಣೆಗೆ ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣ ಮಾಡುವವರು ಮೊದಲಿಗೆ ಗಣಂಗೂರು ಟೋಲ್‌ನಲ್ಲಿ 155 ರೂ. ಕಟ್ಟಬೇಕು. ಇದಾದ ಬಳಿಕ ಕಣಮಿಣಕಿ ಟೋಲ್‌ನಲ್ಲಿ 165 ರೂ. ಅನ್ನು ಪಾವತಿ ಮಾಡಬೇಕಾಗಿದೆ.

ಏಕಮುಖ ಸಂಚಾರಕ್ಕೆ 320 ರೂ. ಟೋಲ್ ದರ ಇರುತ್ತದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲವೆಂದರೆ ಈ ಹಣ ದುಪ್ಪಟ್ಟು ಆಗಲಿದೆ.

Share This Article
Leave a comment