ಬಾಲಿವುಡ್ನ ನಟ ಶಕ್ತಿ ಕಪೂರ್ ಪುತ್ರ ಹಾಗೂ ನಟಿ ಶ್ರದ್ಧಾ ಕಪೂರ್ ಸಹೋದರ. ಸಿದ್ದಾಂತ್ ಕಪೂರ್ ಡ್ರಗ್ಸ್ ಸೇವನೆ ಮಾಡಿರುವುದು ದೃಢವಾಗಿದೆ. ಹೋಟೆಲ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂಬೈನಿಂದ ಬೆಂಗಳೂರಿಗೆ ಬಂದು ಪಂಚತಾರಾ ಹೋಟೆಲ್ನಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ನಶೆ ಮೈಗೇರಿಸಿಕೊಳ್ಳುತ್ತಿರುವಾಗ ಪೊಲೀಸರು ಎಂಟ್ರಿ ಕೊಟ್ಟಿದ್ದರು.
ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿ ಇರುವ ಪಾರ್ಕ್ ಹೋಟೆಲ್ ನಲ್ಲಿ ಬಾಲಿವುಡ್ ನಟ ಸಿದ್ದಾಂತ್ ಕಪೂರ್ ಜೊತೆ ಪಾರ್ಟಿಯಲ್ಲಿ ರಾಜಕಾರಣಿಗಳು, ಉದ್ಯಮಿಗಳು, ನಟರು ಸೇರಿದಂತೆ ಪ್ರತಿಷ್ಠಿತ ವ್ಯಕ್ತಿಗಳೆನಿಸಿಕೊಂಡವರ ಮಕ್ಕಳು ಭಾಗಿಯಾಗಿದ್ದರು.
ಪಾರ್ಟಿಯಲ್ಲಿ ಭಾಗಿಯಾಗಿದ್ದ 150 ಕ್ಕೂ ಹೆಚ್ಚು ಜನರಲ್ಲಿ ಹಲವರು ಪರಾರಿಯಾದರೆ ಹೋಟೆಲ್ ತಡಕಾಡಿದ ಪೊಲೀಸರಿಗೆ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಗೆ ಸಾಕ್ಷ್ಯ ಸಿಕ್ಕಿದೆ. 4 ಗುಲಾಬಿ ಮತ್ತು 3 ನೀಲಿ ಎಂಡಿಎಂಎ ಟ್ಯಾಬ್ಲೆಟ್ಗಳು ಪತ್ತೆಯಾಗಿದ್ದು, 5 ಗ್ರಾಂ ಗಾಂಜಾ ಸಿಕ್ಕಿದೆ.
ಇದನ್ನು ಓದಿ –ದೊಡ್ಡಪತ್ರೆ ( Mexican mint plant)
ರೇಡ್ ವೇಳೆ 14 ಮಂದಿ ಯುವತಿಯರು ಹಾಗೂ 21 ಜನ ಯುವಕರು ಸೇರಿದಂತೆ 35 ಜನ ಲಾಕ್ ಆಗಿದ್ದರು ಇವರ ಡ್ರಗ್ಸ್ ಟೆಸ್ಟ್ ಮಾಡಿಸಿದಾಗ ಬಾಲಿವುಡ್ ನಟ ಸಿದ್ದಾಂತ್ ಕಪೂರ್ ಡ್ರಗ್ಸ್ ತೆಗೆದುಕೊಂಡಿದ್ದು ದೃಢಪಟ್ಟಿದೆ. ಜೊತೆಗೆ ಅಕಿಲ್ ಸೋನಿ, ಹರ್ಜೋತ್ ಸಿಂಗ್, ಅಕಿಲ್ ಹನಿ ಎಂಬ ಐವರ ರಿಪೋರ್ಟ್ ಪಾಸಿಟಿವ್ ಬಂದಿದೆ.
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!