ಪ್ರಧಾನಿ ನರೇಂದ್ರ ಮೋದಿ ಮಾ 12 ರಂದು ಮಂಡ್ಯ ಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಮಾರ್ಗ ಬದಲಾವಣೆ ಮಾಡಿ ಜಿಲ್ಲಾ ಎಸ್ಪಿ ಬೆಂಗಳೂರು – ಮೈಸೂರು ರಸ್ತೆ ಸಂಚಾರದ ಮಾರ್ಗಗಳನ್ನು ಬದಲಾಯಿಸಿದ್ದಾರೆ.
ಮಾ12 ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಬೆಂಗಳೂರು – ಮೈಸೂರು ಮಾರ್ಗ ಬದಲಾವಣೆ ಮಾಡಿದ್ದಾರೆ.
ಮೈಸೂರು ನಗರದಿಂದ ಬೆಂಗಳೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲಾ ರೀತಿಯ ವಾಹನಗಳನ್ನು ಮೈಸೂರು -. ಬನ್ನೂರು – ಕಿರುಗಾವಲು – ಮಳವಳ್ಳಿ – ಹಲಗೂರು – ಕನಕಪುರ – ಬೆ೦ಗಳೂರು ಮಾರ್ಗವಾಗಿ ಸಂಚರಿಸಲು ಅನುವು ಮಾಡಲು ಕೋರಲಾಗಿದೆ.
ಮೈಸೂರು ನಗರದಿಂದ ತುಮಕೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲಾ ರೀತಿಯ ವಾಹನಗಳನ್ನು ಮೈಸೂರು – ಶ್ರೀರಂಗಪಟ್ಟಣ – ಪಾಂಡವಪುರ – ನಾಗಮಂಗಲ – ಬೆಳ್ಳೂರುಕ್ರಾಸ್ – ತುಮಕೂರು ಮಾರ್ಗವಾಗಿ ಸ೦ಚರಿಸಲು ಅನವು ಮಾಡಲು ಕೋರಲಾಗಿದೆ.
ತುಮಕೂರಿನಿಂದ ಮೈಸೂರಿಗೆ ಮದ್ದೂರು ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲಾ ರೀತಿಯ ವಾಹನಗಳನ್ನು ತುಮಕೂರು-ಬೆಳ್ಳೂರುಕ್ರಾಸ್-ನಾಗಮಂಗಲ-ಪಾ೦ಡವಪುರ-ಶ್ರೀರಂಗಪಟ್ಟಣ-ಮೈಸೂರು ಮಾರ್ಗವಾಗಿ ಸಂಚರಿಸಲು ಅನುವು ಮಾಡಲು ಕೋರಲಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲಾ ರೀತಿಯ ವಾಹನಗಳನ್ನು
ಬೆಂಗಳೂರು ಜ್ಞ ಚನ್ನಪ ಟ್ಟಣ – ಹಲಗೂರು – ಮಳವಳ್ಳಿ – ಕಿರುಗಾವಲು – ಬನ್ನೂರು -: ಸೂರು. ಮಾರ್ಗವಾಗಿ ಸಂಚರಿಸಲು. ಅನುವು ಮಾಡುವಂತೆ ಕೋರಲಾಗಿದೆ.
ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಕೊಳ್ಳೇಗಾಲ – ಮಹದೇಶ್ವರ ಬೆಟ್ಟಕ್ಕೆ ತೆರಳುವ ಎಲ್ಲಾ ರೀತಿಯ ವಾಹನಗಳನ್ನು ಬೆ೦ಗಳೂರು – ಚನ್ನಪಟ್ಟಣ – ಹಲಗೂರು – ಮಳವಳ್ಳಿ – ಕೊಳ್ಳೇಗಾಲ -ಮಹದೇಶ್ವರಬೆಟ್ಟ ಮಾರ್ಗವಾಗಿ ಸ೦ಚರಿಸಲು ಅನುವು ಮಾಡುವಂತೆ ಕೋರಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು