ಹೈಕೋರ್ಟಿನಲ್ಲಿ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ವಿಮೋಚನೆಗಾಗಿ ಹೈಕೋರ್ಟಿನಲ್ಲಿ PIL ದಾಖಲು ಮಾಡಿರುವ 108 ಭಜರಂಗ ಸೇನೆ ಕಾರ್ಯಕರ್ತರು ಮಂಡ್ಯದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಭಾನುವಾರ ಬೈಕ್ ಜಾಥ ಮಾಡಿದರು.
ದೇವಸ್ಥಾನದ ದೇವರ ಮೂರ್ತಿಯ ಪಾದದ ಬಳಿ ಪಿಟೀಷನ್ ಪ್ರತಿಯನ್ನು ಇಟ್ಟು ವಿಶೇಷ ಪೂಜೆ ಅರ್ಚನೆ ಮಾಡಿಸಿದರು ಈ ಕಾನೂನು ಹೋರಾಟದಲ್ಲಿ ವಿಜಯ ದೊರಕಲಿ ಎಂದು ಪ್ರಾರ್ಥನೆ ಮಾಡಿ, ಕಾರ್ಯಕರ್ತರು ಹರಕೆ ಕಟ್ಟಿಕೊಂಡರು.ತುಂಗಾ ನದಿ ತೀರದಲ್ಲಿ ಸ್ಫೋಟ ಮಾಡಿ ಎಸ್ಕೇಪ್ ಆಗಿದ್ದ ಮಂಗ್ಳೂರಲ್ಲಿ ಕುಕ್ಕರ್ ಬಾಂಬ್ ಸಿಡಿಸಿ ಸಿಕ್ಕಿಬಿದ್ದ
ಹೈಕೋರ್ಟಿಗೆ ಮಾಡಿರುವ ಮನವಿಯಲ್ಲಿ ಎರಡು ಪ್ರಮುಖ ಅಂಶಗಳನ್ನು ಗಮನ ಸೆಳೆಯಲಾಗಿದೆ ಅಕ್ರಮವಾಗಿ ನಡೆಯುತ್ತಿರುವ ಮದರಸವನ್ನು ತೆರವು ಗೊಳಿಸಬೇಕು ಹಾಗೂ ವಿವಾದಿತ ಜಾಗವನ್ನು ದೇವಸ್ಥಾನ ಎಂದು ಘೋಷಿಸಿ ಹಿಂದುಗಳಿಗೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಭಜರಂಗ ದಳದ ರಾಜ್ಯಧ್ಯಕ್ಷ ಬಿ. ಮಂಜುನಾಥ್. ಹರ್ಷ. ಶಿವು. ಯತೀಶ್. ಚೇತನ್. ಸಾವ್ಯಾಸಾಚಿ. ಸತೀಶ್. ಆನಂದ. ಮುಂತಾದವರು ಈ ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ದರು.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ