ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ವಿಚಾರ ಪ್ರಸ್ತಾಪಿಸಿದಕ್ಕೆ ಹಿಂದೂ ಸಂಘಟನೆ ಸಿಡಿದೆದ್ದಿದ್ದು, ರಾಜ್ಯಾದ್ಯಂತ ಆಂಜನೇಯ ದೇವಸ್ಥಾನಗಳಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಆಯೋಜಿಸಿದೆ.
ಬಜರಂಗದಳವನ್ನು ನಿಷೇಧಿಸುವ ವಿಚಾರವೂ ಧರ್ಮಕ್ಕೆ ಸಂಕಟವೆರಗಿರುವ ಸಮಯ. ಒಟ್ಟಾಗಿ ನಿಲ್ಲುವುದೊಂದೇ ಪರಿಹಾರ . ನಮ್ಮೆಲ್ಲ ಭೇದಗಳನ್ನು ಒತ್ತಟ್ಟಿಗಿಟ್ಟು ಧರ್ಮರಕ್ಷಣೆಗೆ ಜೊತೆಯಾಗೋಣ, ಕೈ ಜೋಡಿಸೋಣ ಎಂದು ಬರೆದುಕೊಳ್ಳುವ ಮೂಲಕ ಪ್ರಕಟಣೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಪಡಿಸಲಾಗಿದೆ.
ಈ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡಲು ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮುಂದಾಗಿದ್ದಾರೆ, ಬಜರಂಗ ದಳ ಸಂಜೆ 7 ಗಂಟೆಗೆ ರಾಜ್ಯಾದ್ಯಂತ ಸಾಮೂಹಿಕ ಹನುಮಾನ್ ಚಾಲಿಸಾ ಪಠಣವನ್ನು ಆಯೋಜಿಸಿದೆ.