January 8, 2025

Newsnap Kannada

The World at your finger tips!

roshan baig

ಮಾಜಿ ಗೃಹಮಂತ್ರಿ ರೋಷನ್ ಬೇಗ್ ಗೆ ಜಾಮೀನು ಮಂಜೂರು

Spread the love

ಐಎಂಎ ಬಹು ಕೋಟಿ ಹಗರಣದ ಆರೋಪಿಯಾಗಿರುವ ಮಾಜಿ ಗೃಹ ಮಂತ್ರಿ ಆರ್ ರೋಷನ್ ಬೇಗ್ ಸಿಬಿಐ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಮನ್ಸೂರ್ ಖಾನ್ ಒಡೆತನದ ಐಎಂಎ ಸಂಸ್ಥೆಯ ಬಹುಕೋಟಿ ಹಗರಣ ಮುಚ್ಚಿ ಹಾಕಲು 400 ಕೋಟಿ ರು ಗಳಷ್ಟು ಹಣವನ್ನು ಲಂಚದ ರೂಪದಲ್ಲಿ ಪಡೆದಿದ್ದರು ಎಂಬ ಕಾರಣಕ್ಕಾಗಿ ಸಿಬಿಐ ಕಳೆದ ನವೆಂಬರ್ 23 ರಂದು ಬಂಧಿಸಿದ್ದರು.

ನಂತರ ನ್ಯಾಯಾಲಯದ ಅನುಮತಿ ಪಡೆದು ಸಿಬಿಐ ಬೇಗ್ ವಿಚಾರಣೆ ಮಾಡಿ , ಜೈಲು ಸೇರಿದ್ದರು. ಈ ನಡುವೆ ಬೇಗ್ ಸಾಕಷ್ಟು ಅನಾರೋಗ್ಯ ಕಾಡಿದ್ದರಿಂದ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿರುವ ಬೇಗ್ ರನ್ನು ಜಯದೇವ ಆಸ್ಪತ್ರೆಗೂ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಕಾರಣಕ್ಕಾಗಿ ತೀವ್ರ ಸ್ವರೂಪದ ಅನಾರೋಗ್ಯ ಕಾಡುವುದರಿಂದ ಜಾಮೀನು ಮಂಜೂರು ಮಾಡುವಂತೆ ಬೇಗ್ ವಕೀಲರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!