ನಬಾರ್ಡ್ ರೈತರ ಬೆನ್ನೆಲುಬು: ಜಿಲ್ಲಾಧಿಕಾರಿ ಡಾ.ಕುಮಾರ

Team Newsnap
1 Min Read

ಮಂಡ್ಯ :

ನಬಾರ್ಡ್ ಸಂಸ್ಥೆ ರೈತರಿಗೆ ಆಧಾರ ಸ್ತಂಭವಾಗುವುದರ ಜೊತೆಗೆ ರೈತರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಶುಕ್ರವಾರ ತಿಳಿಸಿದರು.

ಅಂಬೇಡ್ಕರ್ ಭವನದಲ್ಲಿ ನಬಾರ್ಡ್ ಹಾಗು ವಿಕಸನ ಸಂಸ್ಥೆಯು ಆಯೋಜಿಸಿದ್ದ ಖರೀದಿದಾರರ- ಮಾರಾಟಗಾರರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತ ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ರೈತರ ಬೆಳೆಗೆ ಬೆಂಬಲ ಬೆಲೆ ಹಾಗೂ ರೈತರ ವಿನೂತನ ಚಿಂತನೆಗಳಿಗೆ ವೇದಿಕೆ ದೊರಕಿಸಿಕೊಡುವ ಒಳ್ಳೆಯ ಉತ್ಪಾದಕ ಕಂಪನಿಯಾಗಿದೆ ಎಂದರು.

ರೈತರಿಗೆ ಅನುಕಂಪದ ಮಾತಗಳನ್ನೇ ಆಡಿ ಅವರನ್ನ ಸಮಾಧಾನ ಪಡಿಸಲಾಗುತ್ತಿದೆ. ಇದು ತರವಲ್ಲ ರೈತರಿಗೆ ಅನುಕಂಪದ ಜೊತೆಗೆ ಅವಕಾಶ ಸೃಷ್ಟಿ ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು‌.

ರೈತರಿಗೆ ವಿಶೇಷವಾದ ಸ್ಥಾನಮಾನ ಕಲ್ಪಿಸಬೇಕು ಜೊತೆಗೆ ರೈತ ಮನಸ್ಥಿತಿಯನ್ನು ಕುಗ್ಗಿಸದೇ ಹಿಗ್ಗಿಸಬೇಕಿದೆ. ನಾವು ರೈತರನ್ನ ಬೆಳಗಿಸಿದರೆ. ರೈತರು ಸಮಾಜವನ್ನು ಬೆಳಗಿಸುತ್ತಾರೆ ಎಂದರು‌.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ನಬಾರ್ಡ್ ಪ್ರಾದೇಶಿಕ ಕಛೇರಿಯ ಮುಖ್ಯ ಮಹಾಪ್ರಬಂಧಕರಾದ ಟಿ.ರಮೇಶ್, ಉಪ ಮಹಾಪ್ರಬಂಧಕರಾದ ದೀಪ ಎಸ್. ಪಿಳ್ಳೈ, ಡಿ.ಡಿ.ಎಂ ಹರ್ಷಿತಾ, ವಿಕಸನ ಸಂಸ್ಥೆಯ ಮಹೇಶ್ ಚಂದ್ರಗುರು ಸೇರಿದಂತೆ ಇನ್ನಿತರರು ಹಾಜರಿದ್ದರು.

Share This Article
Leave a comment