ಬಿ.ವೈ.ವಿಜಯೇಂದ್ರ ‘ಕರ್ನಾಟಕ ಬಿಜೆಪಿ’ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ

Team Newsnap
1 Min Read

ಬೆಂಗಳೂರು : ಮಾಜಿ ಸಿಎಂ BSY ಪುತ್ರ ಬಿ.ವೈ ವಿಜಯೇಂದ್ರ ಕರ್ನಾಟಕ ಬಿಜೆಪಿ ( Karnataka BJP ) ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ.

ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸಿದ ವಿಜಯೇಂದ್ರ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವಂ ಬಿ.ಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು .

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಿಜೆಪಿಯ ಕಚೇರಿಗೆ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗಮಿಸಿದ ಬಾಳಿಕ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು.

ಇದನ್ನು ಓದಿ – ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಗಾವಿಗೆ ಸಂಚಾರ ವಿಸ್ತರಣೆ 

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ , ಗೋವಿಂದ ಕಾರಜೋಳ , ಮಾಜಿ ಸಚಿವ ಆರ್ ಅಶೋಕ್, ಮುನಿರತ್ನ, ತೇಜಸ್ವಿ ಸೂರ್ಯ ,ಅರಗ ಜ್ಞಾನೇಂದ್ರ, ಬಿ ಶ್ರೀರಾಮುಲು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು .

Share This Article
Leave a comment