December 21, 2024

Newsnap Kannada

The World at your finger tips!

minister,congress,agriculture

State Agriculture Minister missing: Congress leaders appeal to search

ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ರೈತ ವಾಸ್ತವ್ಯ ಕಾರ್ಯಕ್ರಮ ಸಚಿವ ಪಾಟೀಲ್

Spread the love

ಮೈಸೂರು

ರೈತರೊಂದಿಗೆ ಇನ್ನಷ್ಟು ಬೆರೆತು ಅವರೊಂದಿಗಿದ್ದಾಗ ಕೃಷಿ ಅಭಿವೃದ್ಧಿಗೆ ಹೊಸಹೊಸ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಜೊತೆಗೆ ರೈತರಿಗೆ ಆತ್ಮವಿಶ್ವಾಸ ಮೂಡಿಸುವುದೇ ತಮ್ಮ ರೈತ ವಾಸ್ತವ್ಯದ ಉದ್ದೇಶ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಂಗಳವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರೈತ ವಾಸ್ತವ್ಯ ಈ ಹಿಂದೆಯೇ ಮಾಡಬೇಕಾಗಿತ್ತಾದರೂ ಕೊರೊನಾ ಲಾಕ್ ಡೌನ್ ನಿಂದಾಗಿ ಅದು ಸಾಧ್ಯವಾಗಲಿಲ್ಲ.ಆಗ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮೂವತ್ತು ಜಿಲ್ಲೆಗಳಲ್ಲಿ ಮೂವತ್ತು ದಿನಗಳ ಕಾಲ ಪ್ರವಾಸ ಮಾಡುತ್ತಿದ್ದೇನೆ.
ಈ ಬಾರಿ ಕೊರೊನಾ ಸಂಕಷ್ಟದಲ್ಲಿಯೂ ಕೃಷಿ ಚಟುವಟಿಕೆ ಸರಾಗವಾಗಿ ನಡೆದು ಬಿತ್ತನೆ ಹೆಚ್ಚುವಂತಾಗಿದೆ.ಕೃಷಿಯತ್ತ ಹೆಚ್ಚು ಗಮನ ಕೇಂದ್ರೀಕೃತವಾಗಿದೆ.ಈಗ ಕೊರೊನಾ ಸೋಂಕು ಕಡಿಮೆಯಾದ ಬಳಿಕ ರೈತ ವಾಸ್ತವ್ಯಕ್ಕೆ ಮುಂದಾಗಿದ್ದೇನೆ. ರೈತರೊಂದಿಗಿನ ವಾಸ್ತವ್ಯದ ಅನುಭವ ಇನ್ನಷ್ಟು ಹೊಸಹೆಜ್ಜೆಗಳಿಗೆ ದಿಕ್ಸೂಚಿಯಾಗಲಿದೆ ಎಂದರು.

ತಮ್ಮೊಂದಿಗೆ ಕೃಷಿ ಅಧಿಕಾರಿಗಳೂ ಸಹ ವಾಸ್ತವ್ಯದಲ್ಲಿ ಇರುತ್ತಾರೆ. ಸಾಧ್ಯವಾದಷ್ಟು ಸ್ಥಳದಲ್ಲಿಯೇ ಬಗೆಹರಿಸಬಹುದಾದ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು.ಅಲ್ಲದೇ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದು ಬಳಿಕವೂ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು ಎಂದು ಹೇಳಿದರು.
ಅಧಿವೇಶನದಲ್ಲಿ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ತಾವು ಸೇರಿದಂತೆ ಸರ್ಕಾರವೂ ಸಹ ಸಿದ್ಧವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡ್ರಗ್ಸ್ ಹಾವಳಿ ಕುರಿತಂತೆ ಉತ್ತರಿಸಿದ ಸಚಿವರು, ಸಿನಿಮಾ ಕ್ಷೇತ್ರವೆನ್ನುವುದು ಗಾಜಿನಮನೆಯಿದ್ದಂತೆ.ನಟ ನಟಿಯರಿಗೆ ಅನುಯಾಯಿಗಳು ಹೆಚ್ಚುಮಂದಿ ಇರುತ್ತಾರೆ.ತಾವು ಸಹ ಸಿನಿಮಾರಂಗದಲ್ಲಿಯೇ ಇದ್ದವರು.ತಮ್ಮ ಕಾಲದಲ್ಲಿ ಡ್ರಗ್ಸ್ ಎಂಬುದು ಸಿನಿರಂಗದಲ್ಲಿ ಇರಲಿಲ್ಲ.ಆದರೀಗ ಆರೋಪ ಕೇಳಿಬಂದಿದೆ.ಯಾರೋ ಮಾಡಿದ ತಪ್ಪಿಗೆ ಇಡೀ ಸಿನಿಮಾರಂಗವನ್ನುದ್ದೇಶಿಸುವುದು ಸರಿಯಲ್ಲ.ರಾಜಕೀಯದವರಾಗಲೀ ಸಿನಿಯಮಾದವರಾಗಲೀ ಅಥವಾ ಇನ್ಯಾರೇ ಆಗಲೀ,ತಪ್ಪು ಮಾಡಿದರೆ ಅದು ತಪ್ಪೇ.ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಿದೆ ಎಂದರು.

Copyright © All rights reserved Newsnap | Newsever by AF themes.
error: Content is protected !!