January 5, 2025

Newsnap Kannada

The World at your finger tips!

azharuddin

ಅಜರುದ್ದೀನ್ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

Spread the love

ಟೀಮ್​ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್ ಕಾರು ಅಪಘಾತದಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜಸ್ಥಾನದ ಸೂರ್ವಾಲದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಈ ಅಪಘಾತದಲ್ಲಿ ಅಜರುದ್ದೀನ್ ಅವರಿಗೆ ಯಾವುದೇ ಗಾಯಗಳಾಗಿಲ್ಲ.

car

ಲಾಲ್ಸೋಟ್​ ಕೋಟಾ ಹೈವೇಯಲ್ಲಿ ಅಪಘಾತ ಸಂಭವಿಸಿದೆ. ಅಜರ್​ ರಣಥಂಬೋರ್​ಗೆ ತಮ್ಮ ಕುಟುಂಬದೊಂದಿಗೆ ಆಗಮಿಸುತ್ತಿದ್ದಾಗ ಅಪಘಾತ ನಡೆದಿದೆ ಎಂದು ಆಪ್ತ ಸಹಾಯಕ ತಿಳಿಸಿದ್ದಾರೆ.

ಮತ್ತೊಂದು ಕಾರಿನಲ್ಲಿ ಅಜರುದ್ದೀನ್ ಹಾಗೂ ಕುಟುಂಬದವರನ್ನು ಹೋಟೆಲ್​ ಕರೆದೊಯ್ಯಲಾಯಿತು.

Copyright © All rights reserved Newsnap | Newsever by AF themes.
error: Content is protected !!