ಆತ್ಮವಿಶ್ವಾಸವೇ ಆಯುಧ; ಆಯುಧ ಪೂಜಾ ಸಂಭ್ರಮ – 2022

Team Newsnap
2 Min Read
Ayudha Pooje celebration ಆಯುಧ ಪೂಜಾ ಸಂಭ್ರಮ

ವಿಜಯದಶಮಿ ಸಂಭ್ರಮಕ್ಕೆ ನಮ್ಮಲ್ಲಿ ವಿಶೇಷ ಸ್ಥಾನಮಾನವಿದೆ. ಸತತ ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ಒಂದೊಂದು ವಿಶೇಷ ಪೂಜೆ ಕೈಗೊಳ್ಳುವ ಪ್ರತೀತಿ ಇದ್ದು, ನವರಾತ್ರಿಯ ಕೊನೆಯ ದಿನದಂದು ಆಚರಿಸುವ ಆಯುಧ ಪೂಜಾ ಸಂಭ್ರಮಕ್ಕೆ ಹೆಚ್ಚಿನ ಮಹತ್ವವಿದೆ.

ಆಯುಧ ಪೂಜೆಯ ಇತಿಹಾಸ

ಪ್ರಜೆಗಳು ಮಹಿಶಾಸುರನೆಂಬ ರಾಕ್ಷಸನಿಂದ ವಿವಿಧ ರೀತಿಯ ತೊಂದರೆಗಳಿಗೆ ಒಳಗಾಗಿರುತ್ತಾರೆ. ದೇವರಿಂದ ಮಹೋನ್ನತ ವರವನ್ನು ಪಡೆದ ಗರ್ವದಿಂದ ಮಹಿಷಾಸುರ ಎಲ್ಲರಿಗೂ ತೊಂದರೆ ಕೊಡಲು ಆರಂಭಿಸುತ್ತಾನೆ. ಮಹಿಷಾಸುರ ಕಾಟ ತಡೆಯಲಾಗದ ಇಂದ್ರಾದಿ ದೇವತೆಗಳು ಮತ್ತು ಪ್ರಜೆಗಳು ಎಲ್ಲರೂ ಸೇರಿ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತಾರೆ.

ಮಹಿಶಾಸುರನಿಂದ ತಮಗಾಗುತ್ತಿರುವ ಉಪಟಳದಿಂದ ಪಾರು ಮಾಡುವಂತೆ ಕೇಳಿಕೊಳ್ಳುತ್ತಾರೆ. ಆಗ ತಾಯಿ ಚಾಮುಂಡೇಶ್ವರಿಯು ಉಗ್ರ ರೂಪ ತಳೆದು ಘೋರ ಯುದ್ಧ ಮಾಡಿ ಮಹಿಶಾಸುರನನ್ನು ಕೊಂದು ಪ್ರಜೆಗಳನ್ನು ಕಾಪಾಡುತ್ತಾಳೆ.

WhatsApp Image 2022 10 03 at 10.46.25 PM 1

ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ನವರಾತ್ರಿಯ ಒಂಬತ್ತನೇ ದಿನದಂದು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳೆಂಬ ನಂಬಿಕೆಯ ದ್ಯೋತಕವಾಗಿ ಮಹಿಷಾಸುರನ ಸಂಹಾರ ಮಾಡಲು ತಾಯಿ ಚಾಮುಂಡಿ ಬಳಕೆ ಮಾಡಿದ ಆಯುಧಗಳನ್ನೆಲ್ಲಾ ಸೇರಿಸಿ ಪೂಜೆ ಮಾಡುವುದೇ ಆಯುಧ ಪೂಜೆಯ ಪ್ರತೀಕ ಎಂದು ಹೇಳಲಾಗುತ್ತದೆ.

ಆಧ್ಯಾತ್ಮಿಕ ಭಾವನೆ ಮೂಡಿಸುವ ಆಯುಧ ಪೂಜೆ ನಾವು ಬಳಸುವ ವಸ್ತುಗಳನ್ನು ಪೂಜೆ ಮಾಡುತ್ತೇವೆ,ನಾವು ಏನು ವೃತ್ತಿ ಮಾಡುತ್ತೇವೋ ಆ ವಸ್ತುಗಳನ್ನು ಪೂಜಿಸಲಾಗುವುದು.

ನವರಾತ್ರಿಯ ಕೊನೆಯ ದಿನದ ಆಚರಣೆ ಮಹಾನವಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ. ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆಗಾಗಿ ಬಳಸಲಾಗುವ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಕೂಡ ಆಯುಧ ಪೂಜೆಯಂದು ಪೂಜಿಸಲಾಗುತ್ತದೆ.

WhatsApp Image 2022 10 03 at 10.39.05 PM 1

ಆಯುಧಪೂಜೆಯಲ್ಲಿ ಸಲ್ಲಿಸುವ ಪೂಜೆ ಅದೊಂದು ಭಾವನಾತ್ಮಕವಾಗಿದೆ, ಕೃಷಿಕನಿಗೆ ಗುದ್ದಲಿ, ಪಿಕಾಸು ಇಂಥ ವಸ್ತುಗಳು ಪ್ರಮುಖ, ಟೈಲರಿಂಗ್ ಮೆಷಿನ್, ಕಾರ್ಖಾನೆಗಳಲ್ಲಿರುವ ಮೆಷಿನ್‌ಗಳು. ಸೈಕಲ್ ಗಳು ಕಾರುಗಳು,ಗಾಡಿಗಳು, ಆಯುಧ ಪೂಜೆಯ ದಿನ ಜನರು ನಮ್ಮನ್ನು ಸಾಕಿ ಸಲುಹುವ ಉಪಕರಣಗಳಿಗೆ ಶ್ರದ್ಧಾ ಭಕ್ತಿಯಿಂದ ಪೂಜೆಮಾಡಿ ಅವುಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಆಯುಧ ಪೂಜೆ.

ಆಯುಧ ಪೂಜೆಯ ದಿನದಂದು ಮಾವಿನ ಸೊಪ್ಪು, ಬಾಳೆಕಂದು, ಕಬ್ಬು ಹಾಗೂ ಚಂಡು ಹೂವುಗಳಿಂದಲೂ ಆಲಂಕಾರವಾಗಿರುವ ವಾಹನಗಳು ಮದುವಣಗಿತ್ತಿಯಂತೆ ರಸ್ತೆಯೆಲ್ಲೆಡೆ ಓಡಾಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿರುತ್ತದೆ.

Share This Article
Leave a comment