ನ್ಯೂಸ್ ಸ್ನ್ಯಾಪ್.
ಕೊಪ್ಪಳ.
ಕರೋನಾದ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡ ಜನ ಅದೆಷ್ಟೋ! ಈಗ ದಾವಣಗೆರೆಯಲ್ಲಿ ಬೆಳಕಿಗೆ ಬಂದ ಅಂತಹದೊಂದು ಪ್ರಕರಣ ಸುಖಾಂತ್ಯ ಕಂಡಿದೆ.
ಬದುಕಿನ ಬಂಡಿ ತಳ್ಳಲು ಆರ್ ಸಿ ಹೆಚ್ ಅಧಿಕಾರಿ ಡಾ. ಎಂ. ಹೆಚ್. ರವೀಂದ್ರನಾಥ್ ಎಂಬುವವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಈ ಕುರಿತಂತೆ ಮಾಧ್ಯಮಗಳು ವರದಿ ಮಾಡಿದವು. ಕುಟುಂಬ ಮತ್ತು ಕಲ್ಯಾಣ ಇಲಾಖೆಯ ಸಚಿವ ಶ್ರೀರಾಮುಲು ಹಿರಿಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ವಿಚಾರಣೆ ಮಾಡಿ ಅವರನ್ನು ಕೊಪ್ಪಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ನಿಯೋಜಿಸಿ ಆದೇಶ ಮಾಡಿದರು.
ಸ್ವತಃ ಸಚಿವ ಶ್ರೀರಾಮುಲು ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಷಯ ವನ್ನು ಬಹಿರಂಗ ಮಾಡಿದ್ದಾರೆ. ಹಗಲಿರುಳು ಶ್ರಮಿಸುವ ಎಲ್ಲಾ ವೈದ್ಯರ ಹಿತಾಸಕ್ತಿ ಕಾಪಾಡಲು ನಮ್ಮ ಸರ್ಕಾರ ಬದ್ಧ ಎಂದೂ ಹೇಳಿದ್ದಾರೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು