ಅಕ್ರಮ ಚಿನ್ನ ಸಾಗಾಣೆ ಮಾಡುತ್ತಿದ್ದ 10 ಮಂದಿಯನ್ನು ಏರ್ ಪೋಟ್ ನಲ್ಲಿ ಬಂಧಿಸಿದ ಅಧಿಕಾರಿಗಳು, ಗುದನಾಳದಲ್ಲಿಟ್ಟು 1.52 ಕೋಟಿ ಮೌಲ್ಯದ ಚಿನ್ನವನ್ನ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 10 ಮಂದಿ ಪ್ರಯಾಣಿಕರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನವೆಂಬರ್ 20 ರಂದು ಕೊಲಂಬೊದಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಈ ವೇಳೆ 10 ಪ್ರಯಾಣಿಕರು ತಮ್ಮ ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಮರೆಮಾಚಿ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಆರೋಪಿಗಳಿಂದ 3066.55 ಗ್ರಾಂ ತೂಕದ 1 ಕೋಟಿ 51 ಲಕ್ಷದ 79 ಸಾವಿರ ಮೌಲ್ಯದ ಚಿನ್ನವನ್ನ ಜಪ್ತಿ ಪಡೆಯಲಾಗಿದೆ.
ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.
More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ