ಸೆ.10 ರಂದು ಲೇಖಕಿ ಶುಭಶ್ರೀಪ್ರಸಾದ್ ಕೃತಿಗಳ ಬಿಡುಗಡೆ ಸಮಾರಂಭ

Team Newsnap
1 Min Read

ಮಂಡ್ಯ:

ಐಡಿಯಲ್ ಪಬ್ಲಿಕೇಷನ್ಸ್ ಹೊರತಂದಿರುವ ಕವಯಿತ್ರಿ ಹಾಗೂ ಲೇಖಕಿ ಡಾ.ಶುಭಶ್ರೀಪ್ರಸಾದ್ ರಚನೆಯ ‘ಬ್ಯಾಂಕರ್ಸ್ ಡೈರಿ’ ಮತ್ತು ‘ಓದಿನ ಓದು’ ಕೃತಿಗಳ ಹಾಗೂ ‘ಶ್ರೀರಾಗ’ಆಡಿಯೋ ಆಲ್ಬಂ ಬಿಡುಗಡೆ ಸಮಾರಂಭ ಸೆ.10 ರಂದು ಭಾನುವಾರ ನಡೆಯಲಿದೆ.

ನಗರದ ಗಾಂಧಿಭವನದಲ್ಲಿ ಭಾನುವಾರ ಬೆಳಿಗ್ಗೆ 10. 30 ರಂದು ನಡೆಯುವ ಈ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು.

ಬೆಂಗಳೂರು ಆಕಾಶವಾಣಿ ಕೇಂದ್ರ ನಿವೃತ್ತ ನಿರ್ದೇಶಕ ಡಾ.ಬಸವರಾಜ ಸಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕೃತಿಗಳನ್ನು ಕುರಿತು ನಿವೃತ್ತ ಆಂಗ್ಲ ಪ್ರಾಧ್ಯಾಪಕಿ ವಿ. ಎಸ್.ಶ್ರೀದೇವಿ ಮಾತನಾಡುವರು.

ಇದೇ ವೇಳೆ ‘ಶ್ರೀರಾಗ’ ಆಡಿಯೋ ಆಲ್ಬಂನ್ನು ಸಂಗೀತ ಸಂಯೋಜಕ ಹಾಗೂ ಕೊಳಲು ವಾದಕ ಉಡುಪಿಯ ಕೆ.ಮುರುಳೀಧರ್, ಮಂಡ್ಯದ ಸುಸ್ವರ ಸಂಗೀತ ಶಾಲೆಯ ನಿರ್ದೇಶಕಿ ರಾಧಿಕಾರಾವ್ ಬಿಡುಗಡೆ ಮಾಡುವರು.

ಐಡಿಯಲ್ ಪಬ್ಲಿಕೇಷನ್ಸ್ ಪ್ರಕಾಶಕ – ಮಾಲೀಕ ಎಂ.ಎಸ್.ಶಿವಪ್ರಕಾಶ್, ಲೇಖಕಿ ಶುಭಶ್ರೀಪ್ರಸಾದ್ ಉಪಸ್ಥಿತರಿರುವರು.

Share This Article
Leave a comment