ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ವಿಧಿವಶ

Team Newsnap
1 Min Read

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಇಂದು ಮುಂಬೈನ ಸೆವೆನ್‌-ಸ್ಟಾರ್‌ ಹೋಟೆಲ್‌ನಲ್ಲಿ ವಿಧಿವಶರಾಗಿದ್ದಾರೆ.

ಜೋನ್ಸ್ ಅವರು ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನ ೧೩ನೇ ಸರಣಿಯ ಕಾರಣ, ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ಕಾಮೆಂಟರಿ ತಂಡದಲ್ಲಿದ್ದರು. ಆದರೆ ಇಂದು ಹೋಟೆಲ್ ನ ತಮ್ಮ ಕೋಣೆಯಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಡೀನ್ ಜೋನ್ಸ್ ಅವರು ೨೪ ಮಾರ್ಚ್ ೧೯೬೧ರಂದು ಆಸ್ಟ್ರೇಲಿಯಾದ ಕೋಬರ್ಗ್ ನಲ್ಲಿ ಜನಿಸಿದರು. ೧೯೮೪ರಲ್ಲಿ ಆಸ್ಟ್ರೇಲಿಯಾ ತಂಡದಿಂದ ತಮ್ಮ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭ ಮಾಡಿದರು. ನಂತರ ೧೯೮೪ ಜನವರಿ ೩೦ರಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ನಡುವೆ ನಡೆದ ಪಂದ್ಯವೇ ಜೋನ್ಸ್ ರ ಚೊಚ್ಚಲ ಪಂದ್ಯ. ೧೯೮೪, ಮಾರ್ಚ್ ನಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯ ನಡುವೆ ನಡೆದ ಟೆಸ್ಟ್ ಪಂದ್ಯವೇ ಜೋನ್ಸ್ ರ ಮೊದಲ ಟೆಸ್ಟ್ ಪಂದ್ಯ. ೧೯೮೫-೧೯೯೦ರ ಅವಧಿಯಲ್ಲಿ‌ ಇವರು, ವಿಶ್ವದ ಅತ್ಯತ್ತಮ ಬ್ಯಾಟ್ಸ್ ಮ್ಯಾನ್ ಎಂದು ಹೆಸರಾಗಿದ್ದರು.

ಜೋನ್ಸ್ ಸಂಪೂರ್ಣ ಫಿಟ್‌ ಮತ್ತು ಆರೋಗ್ಯಕರವಾಗಿದ್ದರು. ಹಾಗೆಯೇ ಭಾರತೀಯ ಮಾಧ್ಯಮಗಳೊಂದಿಗೆ ಸಕ್ರಿಯರಾಗಿದ್ದರು.
ಪ್ರಸ್ತುತ ಐಪಿಎಲ್ ಅರಬ್ ದೇಶಗಳಲ್ಲಿ ನಡೆಯುತ್ತಿದೆ. ಇದರ ಕಾಮೆಂಟರಿ ನೀಡಲೆಂದು ಬಂದವರು ಈಗ ವಿಧಿವಶರಾಗಿದ್ದಾರೆ.

Share This Article
Leave a comment