January 28, 2026

Newsnap Kannada

The World at your finger tips!

nagarsabe hassan

ಹಾಸನ‌ ನಗರಸಭಾ ಆಯುಕ್ತ ಕೃಷ್ಣಮೂರ್ತಿ ಮೇಲೆ ಹಲ್ಲೆ

Spread the love

ಖಾಸಗಿ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯುತ್ತಿದ್ದ ಲಸಿಕಾ ಕಾರ್ಯವನ್ನು ಸಂಜೆ 6 ಗಂಟೆಯವರೆಗೆ ಮುಂದುವರೆಸುವಂತೆ ಸೂಚಿದ ನಗರಸಭಾ ಆಯುಕ್ತರ ಮೇಲೆ ಹಲ್ಲೆ ನಡೆಸಿದ ಘಟನೆ ಹಾಸನದಲ್ಲಿ ಜರುಗಿದೆ.

ಹಾಸನದ ಹೇಮಾವತಿ ಬಡಾವಣೆ ಯಲ್ಲಿ ರುವ ಯತೀಂದ್ರ ಪಬ್ಲಿಕ್ ಸ್ಕೂಲ್ ಮಾಲೀಕರಿಂದ ನಗರಸಭೆ ಕಮೀಷನರ್ ಮೇಲೆ ಹಲ್ಲೆ ನಡೆದಿದೆ.

ಪಬ್ಲಿಕ್ ಸ್ಕೂಲ್ ನಲ್ಲಿ ನಡೆದಿದ್ದ ಲಸಿಕಾ ಕಾರ್ಯ ಕ್ರಮವನ್ನು ಮಧ್ಯಾಹ್ನ 2 ಗಂಟೆಗೆ ನಿಲ್ಲಿಸುವುದಾಗಿ ಹೇಳಿದ್ದ ಮಾಲೀಕರಿಗೆ ಆಯುಕ್ತ ಕೃಷ್ಣಮೂರ್ತಿ ಸಂಜೆ 6 ಗಂಟೆ ತನಕ ಮುಂದುವರೆಸುವಂತೆ ಸೂಚಿಸಿದ್ದೇ ಗಲಾಟೆ ಕಾರಣವಾಗಿದೆ ಎನ್ನಲಾಗಿದೆ.

ಇದೇ ವಿಷಯಕ್ಕೆ ಗಲಾಟೆ ಆರಂಭವಾಗಿದೆ. ಸ್ಕೂಲ್ ಮಾಲೀಕ ಹಾಗೂ ಸಿಬ್ಬಂದಿ ಗಳು ಕಮೀಷನರ್ ಮೇಲೆ ಹಲ್ಲೆ ಮಾಡಿದ್ದಾರೆ.

error: Content is protected !!