ರಾಜ್ಯ ಕಾಂಗ್ರೆಸ್ನ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ಗೆ ಸೇರಿದ ರೆಸ್ಟೋರೆಂಟ್ನಲ್ಲಿ ಗಲಾಟೆ ನಡೆದಿದೆ . ಇದು ಮೈಸೂರುನಗರದ N.R.ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ
ರೆಸ್ಟೋರೆಂಟ್ ನಡೆಸಲು ಗುತ್ತಿಗೆ ಪಡೆದಿದ್ದ ಕೃತಿಕಾ ಗೌಡ ಮೇಲೆ ಸಯ್ಯದ್ ರಿಯಾಜ್ ಎಂಬಾತ ಹಲ್ಲೆ ನಡೆಸಿದ್ದಾರೆಂಬ ಆರೋಪ
ನಲಪಾಡ್ಗೆ ಸೇರಿರುವ ಈ ರೆಸ್ಟೋರೆಂಟನ್ನ ಕೃತಿಕಾ ಗೌಡ, ಮೂರು ವರ್ಷಗಳವರೆಗೆ ನಡೆಸಲು ಗುತ್ತಿಗೆ ಪಡೆದುಕೊಂಡಿದ್ದರು.
ಇದೀಗ ಹೋಟೆಲ್ನ ಉಸ್ತುವಾರಿ ನೋಡಿಕೊಳ್ತಿದ್ದ ಸಯ್ಯದ್ ರಿಯಾಜ್ ಹಾಗೂ ಮತ್ತಿತರರು ಹೋಟೆಲ್ ಖಾಲಿ ಮಾಡುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ ಅಂತಾ ಕೃತಿಕಾ ಗೌಡ ಆರೋಪಿಸಿದ್ದಾರೆ.
ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೃತಿಕಾ ಗೌಡ ಹೇಳಿದ್ದು :
ನಾನು ನಲಪಾಡ್ ಅವರ ಹೋಟೆಲ್ ಅನ್ನು ಮೂರು ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದೇನೆ. ಆದರೆ ಈ ಹೋಟೆಲ್ ಉಸ್ತುವಾರಿ ಸಯ್ಯದ್ ರಿಯಾಜ್, ಒಂದೇ ವರ್ಷಕ್ಕೆ ಹೋಟೆಲ್ ಖಾಲಿ ಮಾಡುವಂತೆ ಧಮ್ಕಿ ಹಾಕುತ್ತಿದ್ದಾರೆ.
ರಾತ್ರಿ ಬಂದು ನನ್ನ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸೆಗಿದ್ದಾರೆ. ನಾನು ನಲಪಾಡ್ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದೆ. ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಮಾಡಿದ್ದೆ. ನಲಪಾಡ್ ಅವರಿಂದ ನನಗೆ ನ್ಯಾಯ ಸಿಗಬೇಕು ಎಂದು ಕೃತಿಕಾ ಗೌಡ ಕಣ್ಣೀರು ಇಟ್ಟಿದ್ದಾರೆ.
ಸಯ್ಯದ್ ರಿಯಾಜ್ ಹೇಳಿಕೆ :
ಹೋಟೆಲ್ ಗುತ್ತಿಗೆ ಪಡೆದಿರುವ ಕೃತಿಕಾ ಹೋಟೆಲ್ ಸರಿಯಾಗಿ ನಡೆಸಿಕೊಂಡು ಹೋಗುತ್ತಿಲ್ಲ. ನಾವು ಯಾವುದೇ ಹಲ್ಲೆ ಮಾಡಿಲ್ಲ. ಆಕೆ ಹೋಟೆಲ್ಗೆ ಲಾಸ್ ಮಾಡಿದ್ದಾಳೆ. ಮ್ಯಾನೇಜ್ಮೆಂಟ್ಗೆ 20 ಲಕ್ಷ ರೂಪಾಯಿಯ ಫೇಕ್ ಚೆಕ್ ಕೊಟ್ಟಿದ್ದಾಳೆ. ಸಿಬ್ಬಂದಿಗೆ ಸಂಬಳ ಕೊಟ್ಟಿಲ್ಲ, ಹೋಟೆಲ್ಗೆ ಸಾಮಗ್ರಿ ಪೂರೈಸುತ್ತಿದ್ದವರಿಗೆ ಹಣ ನೀಡಿಲ್ಲ. ಕೇಳಿದರೆ ಜಗಳ ಮಾಡುತ್ತಾಳೆ. ಅವರು ನನಗೆ ಸುಮಾರು 35 ಲಕ್ಷ ರೂಪಾಯಿ ಹಣವನ್ನ ಕಟ್ಟಿಕೊಡಬೇಕಿದೆ. ಆಕೆ ಎಲ್ಲರಿಗೂ ಮೋಸ ಮಾಡಿದ್ದಾಳೆ. ಇದನ್ನು ಕೇಳಿದ್ದಕ್ಕೆ ತನಗೆ ಮಾತನಾಡಲು ಬರುತ್ತದೆ ಎಂದು ಏನೇನೋ ಆರೋಪ ಮಾಡಿದ್ದಾಳೆ. ಅದೆಲ್ಲ ಸುಳ್ಳು ಅಂತಾ ಸಯ್ಯದ್ ಹೇಳಿದ್ದಾರೆ.
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
- ಮುಡಾ ಹಗರಣ: ಬದಲಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ, ತನಿಖಾ ವರದಿ ಆಧರಿಸಿ ಸರ್ಕಾರದ ಕ್ರಮ
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
ಮುಡಾ ಹಗರಣ: ಬದಲಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ, ತನಿಖಾ ವರದಿ ಆಧರಿಸಿ ಸರ್ಕಾರದ ಕ್ರಮ
ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ