ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ಆರೋಪದ ಜೊತೆ ಈಗ ಒಬ್ಬರಲ್ಲಿ ಬಾಲಕಿ ದಲಿತ ಸಮುದಾಯಕ್ಕೆ ಸೇರಿದವಳು, ಈ ಹಿನ್ನಲೆಯಲ್ಲಿ ಶ್ರೀಗಳ ವಿರುದ್ದ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 28ರ (ಭಾನುವಾರ)ದಂದು ಪ್ರಕರಣದ ವಿಚಾರಣೆ ವೇಳೆಯಲ್ಲಿ ಬಾಲಕಿಯ ಹೇಳಿಕೆ ಮೇರೆಗೆಶ್ರೀಗಳ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ
ಚಿತ್ರದುರ್ಗ ಬಾಲಕಿಯರ ಬಾಲಮಂದಿರ ಎದುರು ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಕ್ಕಳ ಪರವಾಗಿ ಹೋರಾಟ ನಡೆಸುತ್ತೇವೆ. ಶ್ರೀಗಳನ್ನು ಕೂಡಲೇ ಬಂಧಿಸಬೇಕು. ದೊಡ್ಡವರನ್ನು ಬಂಧಿಸಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಪ್ರಶ್ನೆ ಮಾಡಿದರು ಗೌರಿಹಬ್ಬ : ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ
ಈ ನಡುವೆ ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅವರನ್ನು ಇದೀಗ ಪೋಲಿಸರ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿತು. ಈ ನಡುವೆ ಮಠಕ್ಕೆ ವಾಪಸ್ಸು ಬಂದ ಶ್ರೀಗಳು ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು, ಇದೇ ವೇಳೆ ಅವರು ಮಾತನಾಡುತ್ತ, ನಾವೆಲ್ಲರೂ ಒಟ್ಟಾಗಿ, ಇದಕ್ಕೆ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಅಂತ ಹೇಳಿದರು.
ಇದೇನು ಹೊಸತು ಅಲ್ಲ, ಕಳೆದ ಹದಿನೈದು ವರ್ಷಗಳಿಂದ ನಡೆಯುತ್ತಿದ್ದು, ಅದರೆ ಅದು ಹೊರಕ್ಕೆ ಬಂದಿರಲಿಲ್ಲ, ಇದಕ್ಕೆ ಈಗ ತಾರ್ಕಿಕ ಅಂತ್ಯ ಬೇಕಾಗಿದೆ ಅಂತ ಹೇಳಿದರು.
ಯಾವುದೇ ಕಾರಣಕ್ಕೂ ಯಾರು ಆತಂಕಕ್ಕೆ ಒಳಗಾಗ ಬೇಡಿ, ನಿಮ್ಮೆಲ್ಲರ ಸಲುವಾಗಿ ನಾವು ಧೈರ್ಯವಾಗಿ ಹೆದರಿಸಬೇಕು. ನಾವೆಲ್ಲರೂ ನೆಲದ ಕಾನೂನನ್ನು ಗೌರವಿಸುತ್ತೇವೆ ಅಂತ ಹೇಳಿದರು. ಆರೋಪಕ್ಕೆ ಬೇಕಾದ ಕಾನೂನು ಸಹಕರವನ್ನು ನೀಡಲಾಗುತ್ತದೆ ಅಂತ ಹೇಳಿದರು, ಈ ನಿಟ್ಟಿನಲ್ಲಿ ಮಠದ ಭಕ್ತರು ಗಾಳಿ ಸುದ್ದಿಗಳನ್ನು ನಂಬಬಾರದು ಅಂತ ಹೇಳಿದರು. ಇನ್ನೂ ನಾವು ನ್ಯಾಯಾಕ್ಕೆ ತಲೆ ಬಾಗುತ್ತೇವೆ ಅಂತ ಹೇಳಿದರು. ಇವತ್ತಿಗೂ ನಾವು ಕಾನೂನಿಗೆ ಬೆಲೆ ನೀಡುತ್ತೇವೆ ಅಂತ ತಿಳಿಸಿದರು. ಸದ್ಯದ ಕೆಟ್ಟ ಪರಿಸ್ಥಿತಿಯಿಂದ ನಾವು ಹೊರಗೆ ಬರುತ್ತೇವೆ ಅಂತ ಹೇಳಿದರು. ಎಲ್ಲರಿಗೂ ಒಳ್ಳೆಯದಾಗಲಿ, ಮಠದ ಭಕ್ತರು ನಮ್ಮ ಜೊತೆ ಇರುವುದು ನಮಗೆ ಧೈರ್ಯ ತಂದಿದೆ. ಯಾವುದಕ್ಕೂ ಹೆದರುವ ಅಗತ್ಯವಿಲ್ಲ, ಅಭಿಮಾನದ ಚಿಲುಮೆಯನ್ನು ಚಿಮ್ಮಿಸುವವರಿಗೆ ಕೂಡ ಧನ್ಯವಾದವನ್ನು ತಿಳಿಸುತ್ತೇವೆ ಅಂತ ವಿರೋಧಿಗಳಿಗೆ ಟಾಂಗ್ ನೀಡಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು