ಬೀದರ್ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಜಿಲ್ಲಾ ಸಹಾಯಕ ನಿರ್ದೇಶಕ ಸಿದ್ದರಾಮ್ ಶಿಂಧೆ ಯುವತಿಯೊಬ್ಬಳನ್ನು 2ನೇ ವಿವಾಹ ಕೊಂಡಿದ್ದಾರೆ ಎಂದು ಮೊದಲ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿದ್ದರಾಮ್ ಶಿಂಧೆ ಪತ್ನಿ ಶಾಲಿನಿ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ
ಐಪಿಸಿ ಸೆಕ್ಷನ್ 498 ವರದಕ್ಷಿಣೆ ಕಿರುಕುಳ ಹಾಗೂ ಐಪಿಸಿ ಸೆಕ್ಷನ್ 494 ದ್ವಿಪತ್ನಿತ್ವ ಸೆಕ್ಷನ್ ಅಡಿ ದೂರು ದಾಖಲಿಸಲಾಗಿದೆ.
ಎರಡನೇ ವಿವಾಹ ?
ಸಿದ್ದರಾಮ್ ಶಿಂಧೆ 1997 ರಲ್ಲಿ ಶಾಲಿನಿ ಅವರನ್ನು ಮದುವೆಯಾಗಿದ್ದರು. ಆದರೆ ಕಳೆದ ಕೆಲ ವರ್ಷಗಳಿಂದ ಡಿವೋರ್ಸ್ ನೀಡುವಂತೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಮೊದಲ ಪತ್ನಿಗೆ ಡಿವೋರ್ಸ್ ನೀಡದೆ 2020ರ ಲಾಕ್ಡೌನ್ನಲ್ಲಿ ಮತ್ತೊರ್ವ ಯುವತಿಯೊಂದಿಗೆ ಮದುವೆಯಾಗಿದ್ದರಂತೆ. ಈ ಬಗ್ಗೆ ಮೊದಲ ಪತ್ನಿ ಶಾಲಿನಿ ಪ್ರಶ್ನಿಸಿದರು. ಅವರ ವಿರುದ್ಧ ದೂರು ಕೊಟ್ಟು ಅರೆಸ್ಟ್ ಮಾಡಿಸೋದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮ್ ಶಿಂಧೆ ವಿರುದ್ಧ ಪತ್ನಿ ಶಾಲಿನಿ ನೀಡಿರುವ ದೂರಿನ ಅನ್ವಯ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲು ಮಾಡಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ