March 12, 2026

Newsnap Kannada

The World at your finger tips!

crime,murder,women

ಗ್ರಾಪಂ‌ ಉಪಾಧ್ಯಕ್ಷನ ಹತ್ಯೆ – ಗೆಳೆಯನೂ ಅಪಘಾತದಲ್ಲಿ ಸಾವು

Spread the love

ಹಳೆ ದ್ವೇಷದ ಹಿನ್ನಲೆಯಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನನ್ನೇ ಬರ್ಭರವಾಗಿ ಕೊಲೆಗೈದ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆಯ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಅಶೋಕ್(46) ಎಂಬುವವರೇ‌ ಕೊಲೆಯಾದವರು.

ಗೆಳೆಯ ಸೋಮಶೇಖರ್ ಎಂಬುವರ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತ ಸಂದರ್ಭದಲ್ಲಿ, ಟಾಟಾ ಏಸ್ ವಾಹನವನ್ನು ಹರಿಸಿ ಹತ್ಯೆಗೈಯ್ಯಲಾಗಿದೆ.

ಟಾಟಾ ಏಸ್ ವಾಹನ ಹಿಂಬದಿಯಿಂದ ಹರಿದ ಪರಿಣಾಮ, ಅಶೋಕ್ ಸ್ಥಳದಲ್ಲೇ ಸಾವನ್ನಪ್ಪಿದ್ರೇ.. ಸೋಮಶೇಖರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಅಶೋಕ್ ಹಾಗೂ ಭೀಮಾ ನಾಯ್ಕ್ ತಾಂಡದ ನಾಗರಾಜ್ ನಾಯ್ಕ್ ಎಂಬುವರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ಉಂಟಾಗಿತ್ತು ಎನ್ನಲಾಗಿದೆ.

ಈ ಹಳೆಯ ವೈಷಮ್ಯದಿಂದಲೇ ಅವರ ಮೇಲೆ ಟಾಟಾ ಏಸ್ ಹತ್ತಿಸಿ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಚಿಕ್ಕನಾಯಕನಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು‌ ತನಿಖೆ ನಡೆಸುತ್ತಿದ್ದಾರೆ.

error: Content is protected !!