December 22, 2024

Newsnap Kannada

The World at your finger tips!

srilank

ಏಷ್ಯಾ T 20 ಕಪ್ : ಪಾಕ್​​ ಮಣಿಸಿ 6ನೇ ಬಾರಿಗೆ ಏಷ್ಯಾಕಪ್​​ಗೆ ಮುತ್ತಿಟ್ಟ ಶ್ರೀಲಂಕಾ

Spread the love

ಏಷ್ಯಾ ಟಿ -20 ಕಪ್ ನ ರೋಚಕ ಫೈನಲ್‌ನಲ್ಲಿ ಶ್ರೀಲಂಕಾ 23 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿ ಆರನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಕಳದ ರಾತ್ರಿ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್​ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ, 23 ರನ್‌ಗಳಿಂದ ಪಾಕಿಸ್ತಾನ ತಂಡವನ್ನ ಮಣಿಸಿದೆ.

ಮೊದಲು ಬ್ಯಾಟ್‌ ಮಾಡಿದ ದಸುನ್‌ ಶನಕ ಬಳಗ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 170 ರನ್‌ ಸೇರಿಸಿತು. ಗುರಿ ಬೆನ್ನತ್ತಿದ ಬಾಬರ್‌ ಅಜಂ ನೇತೃತ್ವದ ಪಾಕಿಸ್ತಾನ 20 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್​​​ ಆಯ್ತು.

ಅರ್ಜುನ್ ಹೊಯ್ಸಳ ಜೊತೆ ಟೀಂ ಇಂಡಿಯಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಹಸೆಮಣೆ ಏರಲಿದ್ದಾರೆ

ಸತತ ಎರಡು ಬಾರಿ ಭಾರತ ಚಾಂಪಿಯನ್ ಆದ ನಂತರ ಏಷ್ಯಾಕಪ್ ಪ್ರಶಸ್ತಿ ಶ್ರೀಲಂಕಾಕ್ಕೆ ಮರಳಿದೆ. 2014 ಬಳಿಕ ಏಷ್ಯಾಕಪ್​​ ಗೆದ್ದಿರುವ ಶ್ರೀಲಂಕಾ ತಂಡದ ಪರ ಬಾನುಕ ರಾಜಪಕ್ಸ 45 ಎಸೆತಗಳಲ್ಲಿ ಅಜೇಯ 71 ರನ್​ ಗಳಿಸಿ ಮಿಂಚಿದರೇ, ಬೌಲಿಂಗ್​ನಲ್ಲಿ ವನಿಂದು ಹಸರಂಗ 3 ವಿಕೆಟ್​ ಕಬಳಿಸಿ ಗೆಲುವಿಗೆ ಕಾಣಿಕೆ ನೀಡಿದ್ದರು.

Copyright © All rights reserved Newsnap | Newsever by AF themes.
error: Content is protected !!