January 9, 2025

Newsnap Kannada

The World at your finger tips!

toing

ಮಹಿಳೆ ಹಲ್ಲೆ ಮಾಡಿದ್ದ ಎಎಸ್ಐ ನಾರಾಯಣ ಅಮಾನತ್ತು – ರವಿಕಾಂತೇಗೌಡ

Spread the love

ಗಾಡಿ ಟೋಯಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕಲ್ಲೇಟು ಹೊಡೆದ ವಿಕಲಚೇತನ ಮಹಿಳೆಯ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ ಎಎಸ್‍ಐ ನಾರಾಯಣ್ ಅಮಾನತು ಮಾಡಲಾಗಿದೆ.

ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿ ಹಲ್ಲೆ ಸಂಬಂಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳದೆ ಹಲ್ಲೆ ಮಾಡಿರೋದು ತಪ್ಪು. ಹಾಗಾಗಿ ಸದ್ಯಕ್ಕೆ ಹಲಸೂರು ಗೇಟ್‍ನಿಂದ ಎಎಸ್‍ಐರನ್ನು ಸ್ಥಳದಿಂದ ಮ್ಯಾನೆಜ್‍ಮೆಂಟ್ ಸೆಂಟರ್‌ಗೆ ನಿಯೋಜಿಸಲಾಗಿದೆ.

ಈ ಘಟನೆ ಬಗ್ಗೆ ಇಲಾಖೆ ತನಿಖೆಗೆ ಕೂಡ ಸೂಚನೆ ನೀಡಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಟೋಯಿಂಗ್ ವಾಹನದಲ್ಲಿ ಕೂತಿದ್ದ ಹಲಸೂರ್ ಗೇಟ್ ಸಂಚಾರಿ ಟೋಯಿಂಗ್ ಎಎಸ್‍ಐ ನಾರಾಯಣ್ ಮೇಲೆ ವಿಕಲಚೇತನ ಮಹಿಳೆ ಕಲ್ಲೇಟು ನೀಡಿದ್ದಾರೆ.

ಎಎಸ್‍ಐ ಮುಖಕ್ಕೆ ಕಲ್ಲು ತಾಗಿ ರಕ್ತ ಬಂದಿದೆ. ಇದರಿಂದ ಸಿಟ್ಟಿಗೆದ್ದ ಎಎಸ್‍ಐ, ಕೂಡಲೇ ವಾಹನದಿಂದ ಕೆಳಗಿಳಿದು ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಬೂಟಿನಿಂದ ಒದ್ದು ಹಲ್ಲೆ ಮಾಡಿದ್ದನ್ನು ಸ್ಮರಿಸಬಹುದು.

Copyright © All rights reserved Newsnap | Newsever by AF themes.
error: Content is protected !!