ಅಶ್ವಿನಿ ಪುನೀತ್​​ ರಾಜ್​ಕುಮಾರ್​ ತಂದೆ ಹೃದಯಾಘಾತದಿಂದ ಸಾವು

Team Newsnap
0 Min Read

ಅಶ್ವಿನಿ ಪುನೀತ್​ ರಾಜ್​​ಕುಮಾರ್ ಅವರಿಗೆ ಇಂದು ಮತ್ತೊಂದು ಆಘಾತ. ಅಶ್ವಿನಿ ಅವರ ತಂದೆ ರೇವನಾಥ್ (78) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅಶ್ವಿನಿ ಪುನೀತ್ ರಾಜ್​​​ಕುಮಾರ್ ತಂದೆ ರೇವನಾಥ್ ಜಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆಯವರು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.

ಇಂದು ದಿಢೀರ್ ಎಂದು ಕಾಣಿಸಿಕೊಂಡ ಎದೆ ನೋವಿನಿಂದಾಗಿ ಕೂಡಲೇ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರೇವನಾಥ್ ಅವರು ಚಿಕಿತ್ಸೆ ಫಲಕಾರಿಯಾಗದೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರೇವನಾಥ್ ಅವರು ಹಿರಿಯ ರಾಜಕಾರಣಿ ಡಿ.ಬಿ ಚಂದ್ರೇಗೌಡರ ಹತ್ತಿರದ ಸಂಬಂಧಿಯು ಹೌದು

Share This Article
Leave a comment