ಅಪ್ಪು ಕನಸಿನ ‘ಗಂಧದಗುಡಿ’ ಟೀಸರ್ ರಿಲೀಸ್​ ಮಾಡಿದ ಅಶ್ವಿನಿ

Team Newsnap
1 Min Read

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಯೋಜನೆ ‘ಗಂಧದ ಗುಡಿ’ಯ ಟೀಸರ್ ಬಿಡುಗಡೆಯಾಗಿದೆ.

ಗಂಧದಗುಡಿ” ವೈಲ್ಡ್​ ಡಾಕ್ಯುಮೆಂಟರಿಯನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್​ ರಾಜ್ ಕುಮಾರ್ ತಮ್ಮ ಪಿಆರ್ ಕೆ ಆಡಿಯೋನಲ್ಲಿ ಬಿಡುಗಡೆ ಮಾಡಿದ್ದಾರೆ.

ಅಪ್ಪು ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಜನ್ಮದಿನದಂದು ಟೀಸರ್ ರಿಲೀಸ್ ಆಗಿದೆ.
ನವೆಂಬರ್ 1 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಪುನೀತ್ ಅವರ ಅಕಾಲಿಕ ಮರಣದಿಂದಾಗಿ ಬಿಡುಗಡೆ ಮುಂದೂಡಲಾಗಿತ್ತು.

ಅದ್ಭುತ ಸ್ಥಳಗಳಿಗೆ ಭೇಟಿ ನೀಡಿರುವ ಅಪ್ಪು, ಸಾಕಷ್ಟು ಅಪಾಯಕಾರಿ ಸ್ಟಂಟ್​ಗಳನ್ನು ಕೂಡ ಈ ವೀಡಿಯೋನಲ್ಲಿ ಅದ್ಭುತವಾಗಿ ಮಾಡಿದ್ದಾರೆ.

ಪಾಲ್ಸ್​ ತುತ್ತ ತುದಿಯಲ್ಲಿ ನಿಂತು ಗಂಧದಗುಡಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ.

ಅಪ್ಪುವನ್ನು ದೊಡ್ಡ ಪರದೆ ಮೇಲೆ ಸಂಪೂರ್ಣವಾಗಿ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು 2022 ರವರಗೆ ಕಾಯಲೇ ಬೇಕಾಗಿದೆ.

Share This Article
Leave a comment