December 25, 2024

Newsnap Kannada

The World at your finger tips!

aryan case

ಆರ್ಯನ್ ಖಾನ್ ಡ್ರಗ್ಸ್ ಕೇಸ್‌ – ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್‍ಗೆ ಹೃದಯಾಘಾತ- ಸಾವು

Spread the love

ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಹೃದಯಾಘಾತಕ್ಕೀಡಾಗಿ ಇಂದು ಸಾವನ್ನಪ್ಪಿದರು

ಚೆಂಬೂರಿನ ಮಹುಲ್ ಪ್ರದೇಶದ ತಮ್ಮ ನಿವಾಸದಲ್ಲಿ ಪ್ರಭಾಕರ್ ಸೈಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವಕೀಲ ತುಷಾರ್ ಖಂಡಾರೆ ತಿಳಿಸಿದ್ದಾರೆ.

ಪ್ರಭಾಕರ್ ಸೈಲ್ ಅವರ ಮೃತದೇಹವನ್ನು ಶನಿವಾರ ಅಂಧೇರಿಯಲ್ಲಿರುವ ಅವರ ಮನೆಗೆ ತಂದು ಅಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

ಸೈಲ್ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸದ್ಯ ಅಂತ್ಯಕ್ರಿಯೆ ನಡೆಸಲು ಸೈಲ್ ಸಹೋದರನ ಬರುವಿಕೆಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ.

ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಕಾರ್ಡೆಲಿಯಾ ಕ್ರೂಸ್ ಡ್ರಗ್ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈ ಪ್ರಕರಣದ ತನಿಖೆಯನ್ನು ಎನ್‍ಸಿಬಿ ಕೈಗೊಂಡಿದೆ. ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಆರ್ಯನ್ ಖಾನ್ ಕೂಡಾ ಆರೋಪಿಯಾಗಿದೆ , ಇದೇ ವೇಳೆ ಪ್ರಭಾಕರ್ ಸೈಲ್ ಹೆಸರು ಕೂಡ ಬೆಳಕಿಗೆ ಬಂದಿತ್ತು. ಡ್ರಗ್ಸ್ ಪ್ರಕರಣದ ಪ್ರಮುಖ ವ್ಯಕ್ತಿಯಾದ ಕಿರಣ್ ಗೋಸಾವಿ ಅವರ ಅಂಗರಕ್ಷಕರಾಗಿದ್ದ ಪ್ರಭಾಕರ್ ಸೈಲ್ ಅವರು ಎನ್‍ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸುಲಿಗೆ ಆರೋಪ ಮಾಡಿದ್ದರು.

Copyright © All rights reserved Newsnap | Newsever by AF themes.
error: Content is protected !!