ಗಂಡನನ್ನು ಜೈಲಿನಿಂದ ಹೊರ ತರಲು ಡ್ರಗ್ಸ್​​ ಮಾರುತ್ತಿದ್ದ ಮಹಿಳೆ ಬಂಧನ

Team Newsnap
1 Min Read

ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಬಾಣಸವಾಡಿ‌ ಪೊಲೀಸರು ಬಂಧಿಸಿದ್ದಾರೆ.

ಫಾತಿಮಾ ಓಮರೀ ಬಂಧಿತ ಆರೋಪಿ. ಕಮನಹಳ್ಳಿ ಬಳಿ ಇರುವ ಕಾಫಿ ಡೇ ಬಳಿ‌ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಳು. ಈ‌ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ. ಇದನ್ನು ಓದಿ – UP ಯಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ಮಧ್ಯಂತರ ತಡೆ ನೀಡದ ಸುಪ್ರೀಂ

ಬಂಧಿತ ಮಹಿಳೆಯಿಂದ 1.5 ಲಕ್ಷ ಬೆಲೆ ಬಾಳುವ ಎಂಡಿ ಕ್ರಿಸ್ಟಲ್ ಮಾದಕ ವಸ್ತು ಹಾಗೂ ಒಂದು ಐ ಪೋನ್​ನನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಆಫ್ರಿಕಾದ ತಾಂಜೇನಿಯಾ ದೇಶದಿಂದ 2018ರಲ್ಲಿ ಟೂರಿಸ್ಟ್ ವೀಸಾದ ಅಡಿಯಲ್ಲಿ ಭಾರತಕ್ಕೆ ಬಂದಿದ್ದಳು. ಮೀಸಾ ಅವಧಿ ಮುಗಿದಿದ್ದರು ಕೂಡ ಅಕ್ರಮವಾಗಿ ಬೆಂಗಳೂರಿನಲ್ಲಿ ‌ವಾಸವಾಗಿದ್ದಳು. ಮಾದಕ ವಸ್ತುಗಳನ್ನು ಮಾರಾಟ ಮಾಡಿ‌ ಹೈ-ಫೈ ಜೀವನವನ್ನು ನಡೆಸುತ್ತಿದ್ದಳು. ಈಕೆಯ ಗಂಡನು ಮಾದಕ ದಂಧೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದಾನೆ. ಗಂಡನನ್ನು ಜೈಲಿನಿಂದ ಹೊರತರಲು ಮಾದಕ ವಸ್ತುವನ್ನು ಮಾರಾಟ ಮಾಡಲು ಮುಂದಾಗಿದ್ದಾಳೆ ಗಂಡ ಕೆಲ್ವಿನ್ ಜೋಸೆಫ್​ನನ್ನ ಸಂಪಿಗೆಹಳ್ಳಿ ಪೊಲೀಸರು ಒಂದು ವರ್ಷದ ಹಿಂದೆ ಬಂಧಿಸಿದ್ದರು. ಇದನ್ನು ಓದಿ – ವಿಧಾನಪರಿಷತ್ ಸದಸ್ಯರಾಗಿ 7 ಸದಸ್ಯರು ಪ್ರಮಾಣವಚನ ಸ್ವೀಕಾರ

ಗಂಡನ ಬಂಧನದ ಬಳಿಕ ಆತನ ದಂಧೆ ಮುಂದುವರೆಸಿದ್ದಳು. ಸದ್ಯ ಬಂಧಿತ ಆರೋಪಿಯ ಮೇಲೆ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನು ಓದಿ – ಮಧು ಜಿ ಮಾದೇಗೌಡರಿಗೆ ಜಯ:ಮೈಸೂರು ವಿಭಾಗದಲ್ಲೇ ಕಾಂಗ್ರೆಸ್ ನಲ್ಲಿ ಹೊಸ ಹುರುಪು- ಹೊಸ ಭರವಸೆ

ಡ್ರಗ್ಸ್

Share This Article
Leave a comment