ಮಂಡ್ಯಮೂಲದ ವ್ಯಕ್ತಿಯನ್ನು ಹತ್ಯೆ ಮಾಡಿದ ಪತ್ನಿ – ಪ್ರಿಯಕರನ ಬಂಧನ

2 killer

ಮಂಡ್ಯದ ಹಲಗೂರು ಮೂಲದ ಗಂಡನನ್ನೇ ಪ್ರಿಯಕರನ ಜೊತೆ ಸೇರಿ ಹತ್ಯೆಗೈದು ಮೂರ್ಛೆರೋಗದ ಕಥೆ ಕಟ್ಟಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬೆಂಗಳೂರಿನ ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಮೃತ ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ ಈತ ಹಲಗೂರು ಸಮೀಪದ ಗ್ರಾಮವೊಂದರ ನಿವಾಸಿ.
ಆತನ ಹೆಂಡತಿ ಶಿಲ್ಪಾ ಹಾಗೂ ಆಕೆಯ ಪ್ರಿಯಕರ ಆರೋಪಿಗಳು.

m 1

ಕಳೆದ ಮೂರು ದಿನಗಳ ಹಿಂದೆ ಮಹೇಶ್ ಅನ್ನು ಆರೋಪಿಗಳು ಕೊಲೆ ಮಾಡಿದ್ದರು. ನಂತರ ಮಂಡ್ಯಕ್ಕೆ ಮಹೇಶ್ ಶವವನ್ನು ತೆಗೆದುಕೊಂಡು ಹೋಗಿ ಮೂರ್ಛೆರೋಗ ಬಂದು ಸಾವನ್ನಪ್ಪಿದ್ದಾರೆ ಎಂದು ಪತ್ನಿ ಶಿಲ್ಪಾ ಕಥೆ ಕಟ್ಟಿದ್ದಳು.

ಈ ಬಗ್ಗೆ ಅನುಮಾನಗೊಂಡು ಪೋಷಕರು ಮಹೇಶ್ ಮೃತ ದೇಹವನ್ನು ಪರಿಶೀಲನೆ ನಡೆಸಿದಾಗ ದೇಹದಲ್ಲಿ ಗಾಯಗಳು ಗುರುತು ಪತ್ತೆಯಾಗಿದೆ.

ಸಿಇಟಿ ರ್ಯಾಂಕ್ ಪಟ್ಟಿ ರದ್ದು : ಹೈಕೋರ್ಟ್ ಮಹತ್ವದ ಆದೇಶ

ಈ ಕುರಿತಂತೆ ಕೂಡಲೇ ಮಂಡ್ಯ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದರು. ನಂತರ ಮಂಡ್ಯ ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ಮಾಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಹೇಶ್ ಕೊಲೆಯಾಗಿರುವುದು ದೃಢಪಟ್ಟಿದೆ.

ನಂತರ ಈ ಸಂಬಂಧ ಮಂಡ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕೋಣಗುಂಟೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಸದ್ಯ ಕೋಣನಕುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Leave a comment

Leave a Reply

Your email address will not be published. Required fields are marked *

error: Content is protected !!