December 19, 2024

Newsnap Kannada

The World at your finger tips!

crime,murder,women

ಮದ್ದೂರಿನ ಮಹಿಳೆ ಮೇಲೆ ಅತ್ಯಾಚಾರ , ಕೊಲೆ ಮಾಡಿದ್ದ ಇಬ್ಬರು ದುಷ್ಕರ್ಮಿಗಳ ಬಂಧನ

Spread the love

ಮದ್ದೂರಿನ ವಿ. ವಿ ನಗರದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ನಂತರ ಉಸಿರುಕಟ್ಟಿಸಿ ಕೊಲೆ ಮಾಡಿ ಇಬ್ಬರು ಆರೋಪಗಳನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಮದ್ದೂರಿನ ವಿಶ್ವೇಶ್ವರಯ್ಯ ನಗರದ 9 ನೇ ಕ್ರಾಸ್ ನಲ್ಲಿರುವ ರಾಮೇಗೌಡರ ಬಾಡಿಗೆ ಮನೆಯಲ್ಲಿ ವಾಸವಿದ್ದ ಪೂರ್ಣಿಮಾ ಅವರನ್ನು ಫೆ.2 ರಂದು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಬೆಟ್ ಶೀಟ್ ನಿಂದ ಕುತ್ತಿಗೆ ಬಿಗಿದು ಅದರಿಂದಲೇ ಮೂಗು-ಬಾಯಿಯನ್ನು ಮುಚ್ಚಿ ಉಸಿರು ಕಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಹಾಗೂ ಮಳವಳ್ಳಿ ಡಿವೈಎಸ್ಪಿ ಲಕ್ಷ್ಮಿನಾರಾಯಣ್ ಪ್ರಸಾದ್ ಅವರ ಮಾರ್ಗ ದರ್ಶನದಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು.

ವೃತ್ತ ನಿರೀಕ್ಷಕ ಕೆ.ಆರ್.ಪ್ರಸಾದ್ ಅವರ ನೇತೃತ್ವ ತಂಡವು ಫೆ.7 ರಂದು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಬಂಧಿಸಿದ್ದಾರೆ.

ರಾಮನಗರ ತಾಲೂಕು ಕೂಟ್ಕಲ್ ಹೋಬಳಿ ರಾಯರದೊಡ್ಡಿ (ಸ್ವಂತ ಊರು ಹೊಂಬೇಗೌಡನದೊಡ್ಡಿ)
ಗ್ರಾಮದ ಎಚ್.ಆರ್.ಮನು ಆಲಿಯಾಸ್ ಮನು (23 ) ಹಾಗೂ ರಾಮನಗರ ತಾಲೂಕು ಕೂಟ್ಕಲ್ ಬಳಿಯ ಹೊಂಬೇಗೌಡನದೊಡ್ಡಿ ಗ್ರಾಮದ ಸಿ.ರಮೇಶ್ ಬಿನ್ ಲೇಟ್ ಚಿಕ್ಕೇಗೌಡ ಬಂಧಿತ ಆರೋಪಿಗಳು.

ಆರೋಪಿಗಳು ಕಿತ್ತುಕೊಂಡು ಹೋಗಿರುವ ವಸ್ತುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿರುವ
ಮೋಟಾರ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Copyright © All rights reserved Newsnap | Newsever by AF themes.
error: Content is protected !!