ಬೆಂಗಳೂರಿನಲ್ಲಿ ಡ್ರಗ್‌ಪೆಡ್ಲರ್‌ಗಳ ಹೆಡೆಮುರಿಕಟ್ಟುವ ಕಾರ್ಯ ಮುಂದುವರೆದಿದ್ದು, ಸಿಸಿಬಿ ಮತ್ತು ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಇಬ್ಬರು ವಿದೇಶಿಯರು ಸೇರಿ ಮೂವರನ್ನು ಬಂಧಿಸಿದೆ.
ರಾಜಧಾನಿಯ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಡಿಎಂಎ ಎಕ್ಸ್ಟಸಿ ಪಿಲ್ಸ್ಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ನೈಜೀರಿಯಾದ ಇಬ್ಬರು ಮತ್ತು ಕೇರಳ ಮೂಲದ ಒಬ್ಬನನ್ನು ಸೋಮವಾರ ಬಂಧಿಸಿದ್ದಾರೆ. ಅವರ ಬಳಿಯಿದ್ದ 210 ಗ್ರಾಂ ತೂಕದ 500 ಎಕ್ಸ್ಟಸಿ ಮಾತ್ರೆಗಳು, ಆರು ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ 30 ಲಕ್ಷರೂ.ಗಳೆಂದು ಪ್ರಕಟಣೆ ತಿಳಿಸಿದೆ.
ಸದರಿ ಮಾದಕ ವಸ್ತುಗಳನ್ನು ಕಾಲೇಜು ವಿದ್ಯಾರ್ಥಿಗಳು, ಐಟಿ,ಬಿಟಿ ಕಂಪನಿಯ ಉದ್ಯೋಗಿಗಳಿಗೆ ಸರಬರಾಜು ಮಾಡಿ ಹೆಚ್ಚಿನ ಹಣ ಗಳಿಸುವ ದಂಧೆಯಲ್ಲಿ ತೊಡಗಿದ್ದರು. ಬಂಧಿತ ಮೂವರ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ1985 ರ ರೀತ್ಯ ಪ್ರಕರಣ ದಾಖಲಾಗಿದೆ.
ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಕೆ.ಸಿ.ಗೌತಮ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆರ್. ದೀಪಕ್, ಸಿಬ್ಬಂದಿಗಳಾದ ವಿನಯ್, ಶಹನೂರು ರಣಮಲ್ಲೇ, ಶಿವಪ್ಪಕುಡಚಿ, ದ್ಯಾವರಸಯ್ಯ, ರಘು ಮತ್ತು ಆನಂದ ಅವರಿದ್ದ ತಂಡ ಕಾರ್ಯಾಚರಣೆ ನಡೆಯಿತು.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ