15 ಮದುವೆಯಾಗಿ ವಂಚಿಸಿದ‌ ಕಿಲಾಡಿಯೊಬ್ಬನ ಬಂಧನ

Team Newsnap
1 Min Read

ಮೈಸೂರು:

ವಿಧವೆಯರು, ಅವಿವಾಹಿತರಿಗೆ ಆನ್‌ಲೈನ್‌ನಲ್ಲಿ ಗಾಳ ಹಾಕಿ ಒಂದಲ್ಲ, ಎರಡಲ್ಲ ಬರೋಬ್ಬರಿ 15 ಮಹಿಳೆಯರ ಜೊತೆ ಮದುವೆಯಾಗಿ, ಹಣ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಕಿಲಾಡಿಯನ್ನು ಮೈಸೂರಿನ ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿ ಬಡಾವಣೆ ನಿವಾಸಿ ಮಹೇಶ್ (35) ಬಂಧಿತ ಆರೋಪಿ.

ಬಂಧಿತನಿಂದ 2 ಲಕ್ಷ ನಗದು, 2 ಕಾರ್, ಒಂದು ಬ್ರೇಸ್‌ಲೈಟ್‌, ಒಂದು ಉಂಗುರ, 2 ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್‌ಗಳನ್ನ ವಶ ಪಡಿಸಿಕೊಳ್ಳಲಾಗಿದೆ.

ಆರೋಪಿ ಮಹೇಶ್‌ ಮೈಸೂರಿನ ನಿವಾಸಿ ಹೇಮಲತಾ ಎಂಬವರಿಗೆ ತಾನು ಡಾಕ್ಟರ್ ಎಂದು ಹೇಳಿಕೊಂಡು ಮೋಸ ಮಾಡಿದ್ದ.

ಆನ್‌ಲೈನ್‌ ಮ್ಯಾಟ್ರೋಮೊನಿ ವೇದಿಕೆಯಲ್ಲಿ ಪರಿಚಯಿಸಿಕೊಂಡು ನಂಬಿಸಿ ವಿಶಾಖಪಟ್ಟಣದಲ್ಲಿ ಮದುವೆ ಮಾಡಿಕೊಂಡಿದ್ದ.

ಕ್ಲಿನಿಕ್ ತೆರೆಯಬೇಕೆಂದು 70 ಲಕ್ಷ ಸಾಲ ಕೊಡಿಸುವಂತೆ ಮಹೇಶ್ ಹೇಮಲತಗೆ ಒತ್ತಾಯ ಹೇರಿದ್ದ, ಸಾಲ ಕೊಡಿಸಲು ಹೇಮಲತಾ ಹಿಂದೇಟು ಹಾಕಿದ್ದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ 15 ಲಕ್ಷ ಹಣ ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ.

ಈ ಬಗ್ಗೆ ಹೇಮಲತಾ ಮೈಸೂರಿನ ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿ ಮಹೇಶ್ ವಿಚಾರಣೆ ವೇಳೆ ತಾನು ಡಾಕ್ಟರ್, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಎಂದು ಹೇಳಿಕೊಂಡು ಮೋಸ ಮಾಡಿರೋದು ಬೆಳಕಿಗೆ ಬಂದಿದೆ.

ಈವರೆಗೆ ಸುಮಾರು 15 ಮಹಿಳೆಯರಿಗೆ ದೋಖಾ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.

Share This Article
Leave a comment