ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಇಂದು ದೊಡ್ಮನೆ ಕುಟುಂಬ ಅನ್ನ ಸಂತರ್ಪಣೆ ಮಾಡ್ತಿದೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಭೋಜನ ಕೂಟ ನಡೆಯುತ್ತಿದ್ದು, ಡಾ.ರಾಜ್ ಕುಟುಂಬದ ಪ್ರಮುಖರು ಅಭಿಮಾನಿ ದೇವರುಗಳಿಗೆ ಊಟ ಬಡಿಸಿ ಭಾವುಕರಾದರು.
ದಿವಗಂತ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ, ಕಣ್ಣೀರು ಹಾಕುತ್ತಲೇ ಅಭಿಮಾನಿಗಳಿಗೆ ಊಟ ಬಡಿಸಿದರು.
ಶಿವಣ್ಣ, ರಾಘಣ್ಣ ಕೂಡ ಊಟ ಬಡಿಸಿದರು. ಬಳಿಕ ಶಿವಣ್ಣ, ರಾಘಣ್ಣ ಬಂದಿರುವ ಎಲ್ಲಾ ಅಭಿಮಾನಿಗಳಿಗೆ ಕೈಮುಗಿಯುತ್ತ ಮಾತನಾಡಿಸಿದರು.
ಕರುನಾಡಿನ ಮನೆಮನೆಯ ಅಪ್ಪು ತೀರಿಕೊಂಡು ಇಂದಿಗೆ 12 ದಿನ. ಈ ಹಿನ್ನೆಲೆಯಲ್ಲಿ ಡಾ.ರಾಜ್ಕುಟುಂಬ ಅಪ್ಪು ಅಭಿಮಾನಿಗಳಿಗೆ ಅನ್ನದಾನ ಮಾಡುತ್ತಿದೆ
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ