December 19, 2024

Newsnap Kannada

The World at your finger tips!

puneeth 1

ಸಾರ್ವಜನಿಕರಿಗೆ ಇಂದಿನಿಂದಲೇ ಅಪ್ಪು ಸಮಾಧಿ ದರ್ಶನ : ರಾಘವೇಂದ್ರ ರಾಜ್​​ಕುಮಾರ್

Spread the love

​ಅಪ್ಪು ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಇಂದಿನಿಂದಲೇ ಅವಕಾಶ ನೀಡಲಾಗುವುದು ಎಂದು ರಾಘವೇಂದ್ರ ರಾಜ್​​ಕುಮಾರ್ ಹೇಳಿದರು.

ಕಂಠೀರವ ಸ್ಟುಡಿಯೋ ದಲ್ಲಿನ ಅಪ್ಪು ಸಮಾಧಿ ಗೆ ಹಾಲು ತುಪ್ಪ ಕಾರ್ಯ ನೆರವೇರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ರಾಘವೇಂದ್ರ ​, ಪುನೀತ್​​ರ ಐದನೇ ದಿನದ ಕಾರ್ಯವನ್ನು ಇವತ್ತು ಪೂರ್ಣ ಮಾಡಿದ್ದೇವೆ. ಮುಂದೇ 11ನೇ ದಿನದ ಕಾರ್ಯದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದರು.

ಅಪ್ಪು ಕಳೆದುಕೊಂಡ ನೋವಿನೊಂದಿಗೆ ನಾವು ಬದುಕುತ್ತೇವೆ. ನಮಗೆ ಬೇರೆ ದಾರಿ ಇಲ್ಲ, ಆಯ್ಕೆಗಳೂ ಇಲ್ಲ. ಈ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ನಮಗೆ ಕೊಡಲಿ ಎಂದರು.

ಪುನೀತ್ ಹೆಸರನ್ನು ಸಾಗರ ಪಟ್ಟಣದ ಒಂದು ಸರ್ಕಲ್​ಗೆ, ಶಿವಮೊಗ್ಗದ ರಸ್ತೆಗೆ ಇಟ್ಟಿರೋದು ಖುಷಿ ಕೊಟ್ಟಿದೆ ಎಂದು ಹೇಳಿದರು

ಸಾರ್ವಜನಿಕ ದರ್ಶನಕ್ಕೆ ಇವತ್ತೇ ಅವಕಾಶ ಕೊಡ್ತೀವಿ. ಪುನೀತ್ ರಾಜ್ ಕುಮಾರ್ ಸಮಾಧಿಗೆ ಇಂದಿನಿಂದ ಅಭಿಮಾನಿಗಳಿಗೆ ಪ್ರವೇಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

Copyright © All rights reserved Newsnap | Newsever by AF themes.
error: Content is protected !!