ಈ ಕಾರ್ಯಕ್ರಮವನ್ನು ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದ ಅಪ್ಪು ಅಭಿಮಾನಿ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ವಿಧಾನಸಭೆ ಚುನಾವಣೆ : ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತ -HDK
ಗಿರಿರಾಜ್ ಹೃದಯಾಘಾತದಿಂದ ಸಾವನ್ನಪ್ಪಿದ ಪುನೀತ್ ಅಭಿಮಾನಿ. ಮಲ್ಲೇಶ್ವರನ ಲಿಂಕ್ ರೋಡ್ ಸಮೀಪ ತಮ್ಮ ನಿವಾಸದಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮವನ್ನು ನೋಡುತ್ತ ಕುಳಿತಿದ್ದರು. ಹೃದಯಾಘಾತಕ್ಕೂ ಮುನ್ನ ಎಂಥ ಮನುಷ್ಯ ತೀರಿ ಹೋದ ಎಂದ ಕಣ್ಣೀರಿಟ್ಟಿದ್ದರಂತೆ.
ನಿನ್ನೆ ಪುನಿತ್ ಪರ್ವ ಕಾರ್ಯಕ್ರಮ ನೋಡಿ ಬೇಸರಗೊಂಡಿದ್ದ ಅಭಿಮಾನಿ ಗಿರಿರಾಜ್, ಒಂದು ವಿಡಿಯೋ ನೋಡಿ ನನಗೂ ಅಪ್ಪು ಥರಾ ಊಟ ಮಾಡಿಸು ಎಂದು ಅಮ್ಮನ ಬಳಿ ಹೇಳಿದ್ದನಂತೆ. ಅದರಂತೆ ನಿನ್ನೆ ತಾಯಿ ಕೈಯಲ್ಲಿ ತುತ್ತು ತಿನ್ನಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಅಪ್ಪು ಫೋಟೋಗೆ ಅಭಿಮಾನಿ ದಿನಾ ಪೂಜೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
10.30 ರ ಸುಮಾರಿಗೆ ಬಾತ್ ರೂಮಿಗೆ ಹೋಗಿದ್ದಾರೆ. ಅಲ್ಲಿಯೇ ಕುಸಿದುಬಿದ್ದಿದ್ದಾರೆ. ಮನೆಯವರಿಗೆ ಗೊತ್ತಾದ ಕೂಡಲೇ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು