December 23, 2024

Newsnap Kannada

The World at your finger tips!

WhatsApp Image 2022 04 04 at 3.24.22 PM

ಅಪ್ಪು ಕನಸಿನ ‘ಗಂಧದ ಗುಡಿ’ ಮೇ ನಲ್ಲಿ ತೆರೆಗೆ – ಮೇಕಪ್ ಇಲ್ಲದೇ ನಟಿಸಿದ ಚಿತ್ರವಿದು

Spread the love

ಅಪ್ಪು ಕನಸಿನ ಪ್ರಾಜೆಕ್ಟ್ `ಗಂಧದ ಗುಡಿ’ ತೆರೆಗೆ ಅಬ್ಬರಿಸಲು ಸಿದ್ದವಾಗುತ್ತಿದೆ.

ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ಮತ್ತು ಅಮೋಘ ವರ್ಷ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಈ `ಗಂಧದ ಗುಡಿ’ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ.

ಪುನೀತ್, ಕರ್ನಾಟಕದ ಹಲವು ಜಾಗಗಳಿಗೆ ಭೇಟಿ ನೀಡಿ, ಬೆಟ್ಟ ಗುಡ್ಡ ಪರಿಸರಗಳ ಮಧ್ಯೆ ಚಿತ್ರೀಸಿರೋ ಈ ಚಿತ್ರ, ಮೇ ತಿಂಗಳ ಕೊನೆಯ ವಾರದಲ್ಲಿ ತೆರೆಗೆ ಬರಲು ಸಿದ್ದವಾಗಿದೆ.

ಈ ಚಿತ್ರ ನೈಜವಾಗಿ ಮೂಡಿ ಬರಬೇಕು ಎಂದು ಮೇಕಪ್ ಹಚ್ಚದೇ ಪುನೀತ್ ನಟಿಸಿರುವ ಸಿನಿಮಾ ಇದು .

‘ಗಂಧದ ಗುಡಿ’ ಟೈಟಲ್ ಹೊತ್ತು ಕರ್ನಾಟಕದ ಮೂಲೆ ಮೂಲೆಯಲ್ಲೂ ಶೂಟ್ ಮಾಡಿ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಸಿದ್ದಪಡಿಸಿ ಹಸಿರಿನ ಕಥೆಯನ್ನು ಹೇಳೋಕೆ ಹೊರಟಿದ್ದಾರೆ ನಿರ್ದೇಶಕ ಅಮೋಘ ವರ್ಷ. ಈ ಡಾಕ್ಯುಮೆಂಟರಿ ಮಾದರಿಯ ಈ ಸಿನಿಮಾ ಪಿಆರ್‌ಕೆ ಪ್ರೋಡಕ್ಷನ್ ಮೂಲಕ ಅಪ್ಪು ಕನಸಿನ ಚಿತ್ರವಾಗಿ ತೆರೆಗೆ ಬರಲಿದೆ.

Copyright © All rights reserved Newsnap | Newsever by AF themes.
error: Content is protected !!